ಮೇ 13 ರಂದು  ಉಡುಪಿ ಸೈಂಟ್ ಸಿಸಿಲಿ ಶಾಲೆಯಲ್ಲಿ ಮತ ಎಣಿಕೆ: ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ

Spread the love

ಮೇ 13 ರಂದು  ಉಡುಪಿ ಸೈಂಟ್ ಸಿಸಿಲಿ ಶಾಲೆಯಲ್ಲಿ ಮತ ಎಣಿಕೆ: ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ

ಉಡುಪಿ: ಮೇ 13 ರಂದು ವಿಧಾನಸಭಾ ಚುನಾವಣೆಯ ಬಗ್ಗೆ ಮತಎಣಿಕೆ ನಡೆಯಲಿದ್ದು, ಸೈಂಟ್ ಸಿಸಿಲಿ ಶಾಲೆಯ ಆವರಣ ಮತ ಎಣಿಕೆ ಕೇಂದ್ರವಾಗಿರುವುದರಿಂದ ಅದರ ಸುತ್ತಲಿನ 100 ಮೀಟರ್ ಪ್ರದೇಶವು ನಿಷೇಧಿತ ಪ್ರದೇಶವಾಗಿರುತ್ತದೆ.

ಮೇ13 ರಂದು ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023ರ ಅನ್ವಯ ಉಡುಪಿ ಜಿಲ್ಲಾ ಕೇಂದ್ರ ಸೈಂಟ್ ಸಿಸಿಲಿ ಶಾಲೆಯ ಆವರಣದಲ್ಲಿ ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆಯು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 6:00 ಗಂಟೆಯ ವರೆಗೆ ನಡೆಯಲಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಈ ಕೆಳಕಂಡಂತೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.

  1. ಬ್ರಹ್ಮಗಿರಿ ಜಂಕ್ಷನ್ ನಿಂದ ಜೋಡುಕಟ್ಟೆ ಯ ವರೆಗೆ ದ್ವಿಪಥ ಸಂಚಾರ ರಸ್ತೆಯನ್ನು ಏಕ ಪಥ ಬಂದ್ ಮಾಡಿದ್ದು, ಒಂದೇ ಪಥದಲ್ಲಿ 2 ಕಡೆ ಸಂಚಾರ ಅನುವು ಮಾಡಿಕೊಡಲಾಗಿದೆ. ಅಜ್ಜರಕಾಡು ಸಾರ್ವಜನಿಕ ಆಸ್ಪತ್ರೆಯ ಕಡೆ ಇರುವ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವುದು.
  2. ಮಲ್ಪೆ, ಕುಂದಾಪುರ, ಕಿದಿಯೂರು ಕಡೆಯಿಂದ ಅಂಬಲಪಾಡಿ ಬ್ರಹ್ಮಗಿರಿ ಮುಖೇನಾ ಉಡುಪಿ ಕಡೆಗೆ ಹೋಗುವ ಎಲ್ಲಾ ಬಸ್ಸುಗಳು ಕರಾವಳಿ ಬನ್ನಂಜೆ ಸಿಟಿ ಬಸ್ ನಿಲ್ದಾಣ ಮೂಲಕ ಬಸ್ಸು ನಿಲ್ದಾಣ ತಲುಪುವುದು.
  3. ಸೈಂಟ್ ಸಿಸಿಲಿ ಶಾಲೆಯ ಸುತ್ತಮುತ್ತಲಿನ ಪ್ರದೇಶವು ನಿಷೇಧಿತ ಪ್ರದೇಶವಾಗಿದ್ದರಿಂದ, ಸದ್ರಿ ಪ್ರದೇಶದ 100 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚಿಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here