
ಮೇ. 13 ರಂದು ಸುರತ್ಕಲ್ ಎನ್.ಐ.ಟಿ.ಕೆ. ಯಲ್ಲಿ ಮತ ಎಣಿಕೆ – ವಾಹನ ನಿಲುಗಡೆ ಕುರಿತು ಮಾಹಿತಿ
ಮಂಗಳೂರು: ಮೇ 13 ರಂದು ಬೆಳಗ್ಗೆ ಸುರತ್ಕಲ್ ಎನ್.ಐ.ಟಿ.ಕೆ. ಯಲ್ಲಿ ವಿಧಾನ ಸಭಾ ಚುನಾವಣೆಯ ಮತ ಎಣಿಕೆಯ ಕಾರ್ಯ ನಡೆಯಲ್ಲಿರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರುಗಳ ಹಾಗೂ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಮಾಡಲಾಗಿರುವ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾದ ಪಾರ್ಕಿಂಗ್ ಸ್ಥಳಗಳ ವಿವರ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳ ವಿವರಗಳು ಈ ಕೆಳಗಿನಂತಿದೆ.
ವಾಹನ ನಿಲುಗಡೆ ಸಳಗಳು
* ಮಂಗಳೂರು ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಎನ್.ಐ.ಟಿ.ಕೆ ಜಂಕ್ಷನ್ ಬಳಿಯಲ್ಲಿ ಎಡಕ್ಕೆ ತಿರುಗಿ ಎನ್.ಐಟಿಕೆ ಅಂಡರ್ಪಾಸ್ ಮುಖಾಂತರ ನಾಲು ಚಕ್ರ (4-Wheeler) ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿರುವ ಎನ್.ಐ.ಟಿ.ಕೆ ವಸತಿಗೃಹದ ಬಳಿಯ, ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು, ಅದೇ ರೀತಿ, ದ್ವಿ-ಚಕ್ರ (2-Wheeler) ವಾಹನಗಳನ್ನು ಎನ್.ಐ.ಟಿ.ಕ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಮೈದಾನದಲ್ಲಿ ನಿಲುಗಡೆ ಮಾಡುವುದು, ಅಥವಾ ಸುರತ್ಕಲ್ ಸುಪ್ರೀಂ ಮಹಲ್ ಸಮುಧಾಯ ಭವನ (Supreme Mahal Community Hall|ನ ಬಳ ರಾಷ್ಟ್ರೀಯ ಹೆದ್ದಾರಿಯಿಂದ ಎಡಬದಿಯ ತಡಂಬೈಲ್ ಸದಾಶಿವ ಮಹಾ ಗಣಪತಿ ದೇವಸ್ಥಾನ ರಸ್ತೆಯಲ್ಲ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
* ಮುಲ್ಕಿ ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ಎನ್.ಐ.ಟಿ.ಕೆ ಜಂಕ್ಷನ್ ಬಳಿಯಲ್ಲಿ ಬಲಕ್ಕೆ ತಿರುಗಿ ಎನ್ ಐ ಟಿಕೆ ಅಂಡರ್ ಪಾಸ್ ಮುಖಾಂತರ ನಾಲು ಚಕ್ರ (4Wheeler) ವಾಹನಗಳನ್ನು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿರುವ – ಎನ್.ಐ.ಟಿ.ಕೆ ವಸತಿ ಗೃಹದ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು, ಅದೇ ರೀತಿ ದ್ವಿಚಕ್ರ (2-Wheeler): ವಾಹನಗಳನ್ನು ಎನ್.ಐ.ಟಿ.ಕೆ. ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಮೈದಾನದಲ್ಲಿ ನಿಲುಗಡೆ ಮಾಡುವುದು, ಅಥವಾ ರಾಷ್ಟ್ರೀಯ ಹೆದ್ದಾರಿಯ ಸುಪ್ರಿಂ ಮಹಲ್ ಸಮುದಾಯ ಭವನ (Supreme Mahal Community Hallನ ಬಳ ಯು-ಟರ್ನ್ ಮಾಡಿ ಎಡಬದಿಯ ತಡಂಬೈಲ್ ಸದಾಶಿವ ಮಹಾ ಗಣಪತಿ ದೇವಸ್ಥಾನ ರಸ್ತೆಯಲ್ಲ ಸಾಗಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
* ಮತ ಎಣಿಕೆ ಕರ್ತವ್ಯಕ್ಕೆ ಬರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಎನ್.ಐ.ಟಿ.ಕೆ ಯ ಮುಖ್ಯ ದ್ವಾರದ ಮೂಲಕ ಒಳ ಪ್ರವೇಶಿಸಿ ಎನ್.ಐ.ಟಿ.ಕೆ ಫುಟ್ ಬಾಲ್ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವುದು.
ವಾಹನ ನಿಲುಗಡೆ ನಿಷೇದಿತ ಸ್ಥಳಗಳು
ರಾಷ್ಟ್ರೀಯ ಹೆದ್ದಾರಿ-66 ರ ಬ ಇರುವ ಎನ್.ಐ.ಟಿ.ಕೆ. ಸಮೀಪದ ಸುಪ್ರೀಂ ಮಹಲ್ ಸಮುದಾಯ ಭವನ Supreme Mahal Community Hall) ನಿಂದ ಟೋಲ್ ಗೇಟ್ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸರ್ವಿಸ್ ರಸ್ತೆಯ ಎರಡೂ ಬದಿಯಲ್ಲ ವಾಹನ ನಿಲುಗಡೆಯನ್ನು ಬೆಳಗ್ಗೆ 6-00 ಗಂಟೆಯಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೆ ಸಂಪೂರ್ಣ ನಿಷೇಧಿಸಲಾಗಿದೆ.
ವಿಶೇಷ ಸೂಚನೆ: ಮತ ಎಣಿಕೆ ಕೇಂದ್ರಕ್ಕೆ ಸಾಕಷ್ಟು ಸಾರ್ವಜನಿಕರು ಆಗಮಿಸುವ ಕಾರಣದಿಂದಾಗಿ ಎನ್.ಐ.ಟಿ.ಕೆ ಯ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳದ್ದು, ಹಾಗಾಗಿ ಸದರಿ ರಸ್ತೆಯಲ್ಲಿ ಉಡುಪಿ ಹಾಗೂ ಮಂಗಳೂರು ಕಡೆಗಳಿಗೆ ಸಂಚರಿಸುವ ಸಾರ್ವಜನಿಕರು ಬದಲಿ ರಸ್ತೆಯನ್ನು ಉಪಯೋಗಿಸುವಂತೆ ಕೋರಲಾಗಿದೆ.