ಮೇ.14: ಗೋವಾದ ಶ್ರೀ ಗೋಕರ್ಣ ಮಠಾಧೀಶರ ಪುರ ಪ್ರವೇಶ

Spread the love

ಮೇ.14: ಗೋವಾದ ಶ್ರೀ ಗೋಕರ್ಣ ಮಠಾಧೀಶರ ಪುರ ಪ್ರವೇಶ

ಮಂಗಳೂರು: ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಮೇ 14, 2023 ರಂದು ಸಂಜೆ 5.30 ಗಂಟೆಗೆ ತಮ್ಮ ಮೂಲ್ಕಿ ಮೊಕ್ಕಂನಿಂದ ಮಂಗಳೂರಿಗೆ ಆಗಮಿಸಲಿದ್ದಾರೆ.

ಪುರ ಪ್ರವೇಶ ಮೆರವಣಿಗೆಯು ವಿ.ಟಿ.ರಸ್ತೆಯ ಚೇತನ ಶಾಲೆಯಿಂದ ಸಂಜೆ 6.00 ಗಂಟೆಗೆ ಆರಂಭವಾಗಿ 7.30ಕ್ಕೆ ಗೋಕರ್ಣ ಮಠ, ಕಾರ್ ಸ್ಟ್ರೀಟ್ ತಲುಪಲಿದೆ.ಸಂಸ್ಥಾನದ ಮಠಾಧಿಪತಿಯಾದ ನಂತರ ಪರಮಪೂಜ್ಯ ಸ್ವಾಮೀಜಿಯವರು ಪ್ರಥಮ ಬಾರಿಗೆ ಮಂಗಳೂರಿನ ಕಾರ್ ಸ್ಟ್ರೀಟ್ ‌ನಲ್ಲಿರುವ ತಮ್ಮ ಸ್ವಮಠಕ್ಕೆ ಭೇಟಿ ನೀಡುತ್ತಿದ್ದಾರೆ.2023 ರ ಮೇ 14 ರಿಂದ 21 ರವರೆಗೆ ಪರಮ ಪೂಜ್ಯ ಸ್ವಾಮೀಜಿಯವರ ಮೊಕ್ಕಾಂನಲ್ಲಿ ಹಲವಾರು ಧಾರ್ಮಿಕ ಆಚರಣೆಗಳು, ಹವನಗಳು, ಮುದ್ರಾಧಾರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.


Spread the love

Leave a Reply

Please enter your comment!
Please enter your name here