ಮೇ 14-18: ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದಲ್ಲಿ ಯು. ಬಿ ಫ್ರೂಟ್ಸ್ ಮಾವು ಮೇಳ
ಉಡುಪಿ: ಸುಮಾರು 30 ವರ್ಷದಿಂದ ಮಾವಿನ ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಸೀಕೋ ಮತ್ತು ಯುಬಿಪಿ ಸಂಸ್ಥೆಯ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯ ಕ್ಷೇತ್ರದಲ್ಲಿ ಮೇ ತಿಂಗಳ ದಿನಾಂಕ 14 ರಿಂದ 18 ರ ವರೆಗೆ ಸೀಕೋ ಮತ್ತು ಯು. ಬಿ ಫೂಟ್ಸ್ ಇವರ ಜಂಟಿ ಆಶ್ರಯದಲ್ಲಿ ಮಾವು ಮೇಳ 2025 ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಬ್ದುಲ್ಲ ಕುನ್ನಿ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೀಕೋ ಮತ್ತು ಯುಬಿಪಿ ಸಂಸ್ಥೆಯು ಹತ್ತು ಹಲವು ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುತ್ತದೆ, ಇದೀಗ ಉಡುಪಿಯ ಸೌಂಧರ್ಯದೊಂದಿಗೆ ಇನ್ನಷ್ಟು ಮೆರುಗು ತುಂಬಿದ ಮಾವಿನ ಮೇಳ ಕಾರ್ಯಕ್ರಮ ಮಾಡಲು ಉಡುಪಿಯ ತೋಟಗಾರಿಕ ಇಲಾಖೆಯ ಅನುಮತಿಯೊಂದಿಗೆ ಮತ್ತು ಅವರ ಸಹಕಾರದೊಂದಿಗೆ ಇಲಾಖೆಯ ಆವರಣದಲ್ಲಿಯೇ ಈ ಕಾರ್ಯಕ್ರಮ ಅತೀ ವಿಜೃಂಬಣೆಯಿಂದ ನಡೆಸಲು ನಾವು ತೀರ್ಮಾನಿಸಿರುತ್ತೇವೆ.
ಉಡುಪಿ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಕ್ಷೇತ್ರದಲ್ಲಿ ಮಾವಿನ ಹಣ್ಣುಗಳ ಹರಾಜಿನಲ್ಲಿ ಭಾಗವಹಿಸಿ ಕೊಯ್ಯಲು ಕಳೆದ 30 ವರ್ಷದಿಂದ ದೂರದ ಮಂಗಳೂರಿನಿಂದ ಬರುತ್ತಿದ್ದು ರೈತರ ತೋಟದ ಹಣ್ಣುಗಳನ್ನು ಖರೀದಿ ಮಾಡಿ ಉತ್ತಮ ವ್ಯವಹಾರ ಮಾಡಿ ಅನುಭವವಿರುವ ಸೀಕೋ ಮತ್ತು UB ಸಂಸ್ಥೆ ಈ ಬಾರಿ ತಮ್ಮ ಆಸಕ್ತಿಯಿಂದ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ತಾಜಾ ಹಾಗೂ ಆರೋಗ್ಯಕರ ಮಾವಿನ ಹಣ್ಣುಮಾರಾಟ ಮಾಡುವ ಉದ್ದೇಶದಿಂದ ಇಲಾಖೆಯ ಅನುಮತಿ ಪಡೆದು ಮಾವಿನ ಮೇಳ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.
ಉಡುಪಿ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಕ್ಷೇತ್ರದಲ್ಲಿ ಮಾವಿನ ಹಣ್ಣುಗಳ ಹರಾಜಿನಲ್ಲಿ ಭಾಗವಹಿಸಿ ಕೊಯ್ಯಲು ಕಳೆದ 30 ವರ್ಷದಿಂದ ದೂರದ ಮಂಗಳೂರಿನಿಂದ ಬರುತ್ತಿದ್ದು ರೈತರ ತೋಟದ ಹಣ್ಣುಗಳನ್ನು ಖರೀದಿ ಮಾಡಿ ಉತ್ತಮ ವ್ಯವಹಾರ ಮಾಡಿ ಅನುಭವವಿರುವ ಸೀಕೋ ಮತ್ತು UB ಸಂಸ್ಥೆ ಈ ಬಾರಿ ತಮ್ಮ ಆಸಕ್ತಿಯಿಂದ ಜಿಲ್ಲೆಯ ಎಲ್ಲಾ ಗ್ರಾಹಕರಿಗೆ ತಾಜಾ ಹಾಗೂ ಆರೋಗ್ಯಕರ ಮಾವಿನ ಹಣ್ಣುಮಾರಾಟ ಮಾಡುವ ಉದ್ದೇಶದಿಂದ ಇಲಾಖೆಯ ಅನುಮತಿ ಪಡೆದು ಮಾವಿನ ಮೇಳ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.
ಪ್ರಸ್ತುತ ಈ ಮೇಳದಲ್ಲಿ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಸ್ಥಳೀಯವಾಗಿ ಬೆಳೆಯುವ ಮಾವಿನ ತಳಿಗಳಾದ ಬನೆಡ್-ಅಪುಸ್-ಮುಂಡಪ್ಪ-ಕದ್ರಿ-ಪೈರಿ-ಕಳೆಕ್ಟರ್-ಕಾಲಪ್ಪಾಡಿ, ಗ್ರಾಹಕರಿಗೆ ಮಾರಾಟಕ್ಕೆ ಲಭ್ಯವಿರುತ್ತದೆ.
ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಬೆಳೆಯುವ ತಳಿಗಳಾದ ಮಲ್ಲಿಕ-ಮಲಗೋವಾ-ನೀಲಂ-ಸಿಂಧೂರ-ಬಂಗನಪಲ್ಲಿ-ಕೇಸರಿ-ದಶಹರಿ- ಮತ್ತು ಶುಗರ್ ಬೇಬಿ, ಎನ್ನುವ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರುತ್ತದೆ.
ಈ 5 ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಸಭೆಯ ಸಭಾಪತಿಗಳಾದ ಯುಟಿ ಖಾದರ್ ರವರು ನೆರವೇರಿಸಲಿದ್ದಾರೆ, ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ಯಶ್ಪಾಲ್ ಸುವರ್ಣ ವಹಿಸಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಳರ್, ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಕೋಟ ಶ್ರೀನಿವಾಸ್ ಪೂಜಾರಿ ಆಗಮಿಸಲಿದ್ದಾರೆ ಅದೇ ರೀತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಮಾನ್ಯ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ಅದೀಕ್ಷರು ಮತ್ತು ಹಲವು ರಾಜಕೀಯ, ಸಾಮಾಜಿಕ ಮುಖಂಡರು ಈ ಮೇಳದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ತಿಳಿಸಿದರು.
ಇಮಾಮ್ ಪಸಂದ್ ವಿಶೇಷ: ಮಾವು ಮೇಳದಲ್ಲಿ ಆಂಧ್ರ ಪ್ರದೇಶದ ಇಮಾಮ್ ಪಸಂದ್ ಮಾವು ವಿಶೇಷವಾಗಿ ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದೆ. ನಯವಾದ, ನಾರಿನ ರಹಿತ ಮೇಲ್ಮೈಯನ್ನು ಹೊಂದಿರುವ ಮಾವು ಹೆಚ್ಚಾಗಿ ಮಾರಾಟವಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಸಮೀರ್, ಸಿದ್ದೀಕ್, ಮೊಹಮ್ಮದ್ ಹ್ಯಾರಿಸ್ ಉಪಸ್ಥಿತಿರಿದ್ದರು.