ಮೇ 21: ಮೀನು ಮಾರಾಟ ಫೆಡರೇಶನ್ ಹಂಗಾರಕಟ್ಟೆ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆ

Spread the love

ಮೇ 21: ಮೀನು ಮಾರಾಟ ಫೆಡರೇಶನ್ ಹಂಗಾರಕಟ್ಟೆ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆ

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಇದರ ಹಂಗಾರಕಟ್ಟಾ ಶಾಖೆಯ ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಯನ್ನು ಮೇ 21 2022ನೇ ಶನಿವಾರ ಸಂಜೆ 4.30ಕ್ಕೆ ನೆರವೇರಿಸಲಿರುವುದಾಗಿ ಫೆಡರೇಷನ್ ಅಧ್ಯಕ್ಷರಾದ  ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ.

ಬ್ಯಾಂಕಿಂಗ್ ವಿಭಾಗದ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ನೆರವೇರಿಸಲಿದ್ದು, ಫೆಡರೇಷನ್ ಅಧ್ಯಕ್ಷರಾದ  ಯಶ್‍ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರಾದ  ಎಸ್.ಅಂಗಾರ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಕ್ಷಿಣ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ  ಜಯ ಸಿ. ಕೋಟ್ಯಾನ್, ಕರ್ನಾಟಕ ಸರಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷರಾದ ಶ್ರೀ ಕಿರಣ್ ಕೊಡ್ಗಿ,ಗೀತಾನಂದ ಫೌಂಡೇಶನ್ ಪ್ರವರ್ತಕರಾದ  ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ   ಜಯಕರ ಶೆಟ್ಟಿ ಇಂದ್ರಾಳಿ, ಐರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಗೀತಾ ಶೆಡ್ತಿ ಭಾಗವಹಿಸಲಿದ್ದಾರೆ.

ಕೋಡಿಬೆಂಗ್ರೆ ಯಾಂತ್ರೀಕೃತ ಮೀನುಗಾರರ ಸಂಘದ ಅಧ್ಯಕ್ಷರಾದ   ಬಿ. ಬಿ. ಕಾಂಚನ್, ಹಂಗಾರಕಟ್ಟಾ   ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷರಾದ  ಬಿ. ಕೇಶವ ಕುಂದರ್, ಕೋಡಿಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ  ಜಯ ಎಸ್. ಕುಂದರ್, ಕೋಡಿಬೆಂಗ್ರೆ ಶ್ರೀವಿಠಲ ರುಖುಮಾಯಿ ದೇವಸ್ಥಾನ ಅಧ್ಯಕ್ಷರಾದ  ಚಂದ್ರ ಕುಂದರ್, ಐರೋಡಿ ಬಾಳ್ಕುದ್ರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಧ್ಯಕ್ಷರಾದ   ಕೃಷ್ಣಪ್ಪ ಬೆನ್ನು, ಕೋಡಿಬೆಂಗ್ರೆ ಶ್ರೀ ದುರ್ಗಾದೇವಿ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ   ಚಂದ್ರಶೇಖರ ನಾಯ್ಕ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love