ಮೇ 3: ಮೋದಿ ಮುಲ್ಕಿ ಭೇಟಿ – ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಹಾಗೂ ಪಾರ್ಕಿಂಗ್ ವಿವರ

Spread the love

ಮೇ 3: ಮೋದಿ ಮುಲ್ಕಿ ಭೇಟಿ – ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಹಾಗೂ ಪಾರ್ಕಿಂಗ್ ವಿವರ

ಮಂಗಳೂರು: ಮೇ 3 ರಂದು ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿರವರು ಮುಲ್ಕಿ ಕೊಲ್ನಾಡಿನಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರ ಕುರಿತು ಸಾರ್ವಜನಿಕ ಸಭೆ ನಡೆಸಲಿದ್ದು, ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ. ಉಡುಪಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಇತರೆ ಜಿಲ್ಲೆಗಳಿಂದ ಸಾರ್ವಜನಿಕರು ಆಗಮಿಸಲಿದ್ದು, ಪ್ರಧಾನಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗ್ಗೆ 7-00 ಗಂಟೆಯಿಂದ ಮಧ್ಯಾಹ್ನ 2-00 ಗಂಟೆಯವರೆಗೆ ಆಯಾಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಹಾಗೂ ವಾಹನ ಪಾರ್ಕಿಂಗ್ ಸ್ಥಳಗಳ ವಿವರಗಳು ಈ ಕೆಳಗಿನಂತಿದೆ.

ವಾಹನ ಸಂಚಾರದ ಪರ್ಯಾಯ ವ್ಯವಸ್ಥೆಯ ವಿವರ (ಡೈವರ್ಷನ್)

  1. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳು ಮುಲ್ಕಿ ವಿಜಯ ಸನ್ನಿಧಿಯ ಬಳಿ ಎಡಕ್ಕೆ ಚಲಿಸಿ ಕಿನ್ನಿಗೋಳಿ– ಕಟೀಲು – ಬಜಪೆ – ಕಾವೂರು ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು.
  2. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ಎಲ್ಲಾ ರೀತಿಯ ವಾಹನಗಳು ಕೆ.ಪಿ.ಟಿ ಜಂಕ್ಷನ್ ನಲ್ಲಿ ಬಲಕ್ಕೆ ಚಲಿಸಿ ಬೊಂದೇಲ್ – ಕಾವೂರು – ಬಜಪೆ – ಕಟೀಲು – ಕಿನ್ನಿಗೋಳಿ – ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್ನಿಂದ ಬಲಕ್ಕೆ ಚಲಸಿ ಕಾವೂರು –ಐಜಪೆ – ಕಟೀಲು – ಕಿನ್ನಿಗೋಳಿ ಮಾರ್ಗವಾಗಿ ಮುಲ್ಕ ಕಡೆಗೆ ಸಂಚರಿಸುವುದು.
  3. ಮಂಗಳೂರು, ಸುರತ್ಕಲ್ ಕಡೆಯಿಂದ ಉಡುಪಿ ಕಡಗೆ ಹೋಗುವ ವಾಹನಗಳು ಹಳೆಯಂಗಡಿ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಪಕ್ಷಿಕರೆ – ಎಸ್-ಕೋಡಿ ಮಾರ್ಗವಾಗಿ ಮುಲ್ಕಿ ಕಡೆಗೆ ಸಂಚರಿಸುವುದು.

ವಾಹನ ಸಂಚಾರ ನಿಷೇಧಿತ ಸ್ಥಳಗಳು (ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ)
(ದಿನಾಂಕ:03.05.2023 ರಂದು ಬೆಳಗ್ಗೆ 07.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ)

  1. ಹಳೆಯಂಗಡಿ ಜಂಕ್ಷನ್ನಿಂದ ಮುಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ಎರಡು ಬದಿಯ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
  2. ರಾಷ್ಟ್ರೀಯ ಹೆದ್ದಾರಿಯ ಕೊಲ್ನಾಡು ಜಂಕ್ಷನ್ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇದಿಸಿದೆ.

ಬ್ಯಾರಿಕೇಡ್ ಪಾಯಿಂಟ್

  • ಕಾರ್ನಾಡು ಬೈಪಾಸ್ (ರಾಷ್ಟ್ರೀಯ ಹೆದ್ದಾರಿ)
  • ಕಾರ್ನಾಡು ಜಂಕ್ಷನ್ (ಕಿನ್ನಿಗೋಳಿ ರಸ್ತೆ)
  • ಮುಲ್ಕಿ ರೈಲ್ವೆ ಸ್ಟೇಷನ್ ಕ್ರಾಸ್ (ಕಿನ್ನಿಗೋಳಿ ರಸ್ತೆ)
  • ಎಸ್-ಕೋಡಿ ಕ್ರಾಸ್ (ಕಿನ್ನಿಗೋಳಿ ರಸ್ತೆ)

ವಾಹನ ನಿಲುಗಡೆ ನಿಷೇಧಿಸಿದ ಸ್ಥಳಗಳು
(ದಿನಾಂಕ: 03.05.2023 ರಂದು ಬೆಳಗ್ಗೆ 07.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ)

  1. ಹಳೆಯಂಗಡಿ ಜಂಕ್ಷನ್ನಿಂದ ಮುಲ್ಕಿ ವಿಜಯ ಸನ್ನಿಧಿವರೆಗಿನ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.
  2. ರಾಷ್ಟ್ರೀಯ ಹೆದ್ದಾರಿಯಿಂದ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆ, ಕೊಲ್ಯಾಡು ಜಂಕ್ಷನ್ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆ ಹಾಗೂ ಕಾರ್ನಾಡು ಬೈಪಾಸಿನಿಂದ ಕಾರ್ನಾಡು ಜಂಕ್ಷನ್ಗೆ ತೆರಳುವ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

ವಾಹನ ನಿಲುಗಡೆ ಸ್ಥಳಗಳು

  1. ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಬೆಳಗ್ಗೆ 9-00 ಗಂಟೆಯ ಒಳಗಾಗಿ ಸಾರ್ವಜನಿಕರನ್ನು ಕಾರ್ಯಕ್ರಮ ಸ್ಥಳದ ಸಾರ್ವಜನಿಕರ ಪ್ರವೇಶ ದ್ವಾರದ ಬಳಿ ಇಳಿಸಿ ಜಾಗತಿಕ ಬಂಟರ ಸಂಘದ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆಗೊಳಿಸುವುದು.
  2. ಉಡುಪಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಕಾರ್ನಾಡು ಬೈಪಾಸಿನಲ್ಲಿ ಸಾರ್ವಜನಿಕರನ್ನು ಇಳಿಸಿ ಯು-ಟರ್ನ್ ಮಾಡಿ ಜಾಗತಿಕ ಬಂಟರ ಸಂಘದ ಬಳಿಯ ಪಡುಬೈಲು ಪಾರ್ಕಿಂಗ್ ಸ್ಥಳದಲ್ಲಿ ಬಸ್ಸುಗಳನ್ನು ನಿಲುಗಡೆಗೊಳಿಸುವುದು.
  3. ಮಂಗಳೂರು ಹಾಗೂ ಉಡುಪಿ ಕಡೆಗಳಿಂದ ಆಗಮಿಸುವ ಸಾರ್ವಜನಿಕ ಲಘುವಾಹನಗಳು ಹಾಗೂ ದ್ವಿ ಚಕ್ರ ವಾಹನಗಳು ಕಾರ್ಯಕ್ರಮ ಸ್ಥಳದ ಎದುರಿನ ಅಂದರೆ, ಉಡುಪಿ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವುದು.
  4. ಮಂಗಳೂರು ಕಡೆಯಿಂದ ಆಗಮಿಸುವ ಸಾರ್ವಜನಿಕ ಲಘುವಾಹನಗಳು ಹಾಗೂ ದ್ವಿ-ಚಕ್ರ ವಾಹನಗಳು ಮಂಗಳೂರು- ಉಡುಪಿ ರಸ್ತೆಯ ಎಡಬದಿಯಲ್ಲಿರುವ ಸುಂದರಾಮ್ ಶೆಟ್ಟಿ ಕಾನ್ವೆನ್ಷನ್ ಹಾಲ್ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡುವುದು.
  5. ಕಾರ್ಯಕ್ರಮಕ್ಕೆ ಆಗಮಿಸುವ ವಿ.ಐ.ಪಿ ವಾಹನಗಳು ಕಾರ್ಯಕ್ರಮ ಸ್ಥಳದ ಪಶ್ಚಿಮ ಬದಿಯಲ್ಲಿನ ಅಂದರೆ ಮಂಗಳೂರು – ಉಡುಪಿ ರಸ್ತೆಯ ಎಡಬದಿಯಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಸುವುದು. (ಗುಂಡಾಲು ಗುತ್ತು ನಿಲುಗಡೆ ಸ್ಥಳ)

ವಿಶೇಷ ಸೂಚನೆ:

ಪ್ರಧಾನ ಮಂತ್ರಿಗಳ ಸಾರ್ವಜನಿಕ ಸಭೆ ಬೆಳಗ್ಗೆ ಸುಮಾರು 11-00 ಗಂಟೆಗೆ ಪ್ರಾರಂಭವಾಗಲಿದ್ದು ಸುಮಾರು 10-30 ಗಂಟೆಯ ನಂತರ ಪ್ರಧಾನಿಗಳು ಕೊಲ್ನಾಡು ಹೆಲಿಪ್ಯಾಡ್ನಿಂದ ಕಾರ್ಯಕ್ರಮ ಸ್ಥಳಕ್ಕೆ ಹೋಗುವವರೆಗೆ ಹಳೆಯಂಗಡಿ ಜಂಕ್ಷನ್ ಬಳಿಯಿಂದ ಹಾಗೂ ಕಾರ್ನಾಡು ಬೈಪಾಸ್ ಬಳಿಯಿಂದ ಕಾರ್ಯಕ್ರಮದ ಸ್ಥಳದವರೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನ ಸಂಚಾರ ನಿಷೇಧಿಸಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ.


Spread the love

Leave a Reply

Please enter your comment!
Please enter your name here