
ಮೇ 6 ಯೋಗಿ ಆದಿತ್ಯನಾಥ್ ಪುತ್ತೂರು ಭೇಟಿ – ವಾಹನ ಸಂಚಾರದಲ್ಲಿ ಮಾರ್ಪಾಡು
ಮಂಗಳೂರು: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 6ರಂದು ಪುತ್ತೂರು ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯ ಜತೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಾರದು ಎಂಬ ದೃಷ್ಟಿಯಿಂದ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ವಾಹನ ಸಂಚಾರ ನಿಷೇಧ ವಿವರಗಳು
- ರಾಷ್ಟ್ರೀಯ ಹೆದ್ದಾರಿ 275 ಎ ಲಿನೆಟ್ ಜಂಕ್ಷನ್ ನಿಂದ ಮುಕ್ರಂಪಾಡಿಯವರೆಗೆ ಹಾಗೂ ಮುಕ್ರಂಪಾಡಿಯಿಂದ ಮೊಟ್ಟೆತಡ್ಕ ವರೆಗೆ ಸದರಿ ರಸ್ತೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಕಾನ್ ವೇ ಬರುವಾಗ ಹಾಗೂ ಹೋಗುವಾಗ ತುರ್ತು ಮತ್ತು ವೈದ್ಯಕೀಯ ವಾಹನಗಳನ್ನು ಹೊರತುಪಡಿಸಿ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ.
- ಮೇ 6 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಬೋಳುವಾರು ಜಂಕ್ಷನ್ – ಗಾಂಧಿ ಕಟ್ಟೆವರೆಗೆ ಮತ್ತು ಕಿಲ್ಲೆ ಮೈದಾನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಹಾಗೂ ಕೋರ್ಟ್ ರಸ್ತೆಯಲ್ಲಿ ತುರ್ತು ವೈದ್ಯಕೀಯ ವಾಹನಗಳನ್ನು ಹೊರತುಪಡಿಸಿ ಸದರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿದೆ.
ಬದಲಿ ರಸ್ತೆ ಮಾರ್ಗದ ವಿವರಗಳು
- ಮಂಗಳೂರು ಮತ್ತು ಕಡಬ ಕಡೆಯಿಂದ ಸಂಚರಿಸುವ ಲಘು ವಾಹನಗಳು ಹಾಗೂ ಸುಳ್ಯ ಮತ್ತು ಸಂಪ್ಯ ಕಡೆಗೆ ಸಂಚರಿಸಲು ಲಿನೆಟ್ ಜಂಕ್ಷನ್-ಬೊಳುವಾರು ಜಂಕ್ಷನ್ – ಪಡೀಲ್-ಕೊಟೇಜಾ ಹಾಲ್, ಸಾಲ್ಮಾರ-ಪುರುಷರಕಟ್ಟೆ-ಪಂಜಳ-ಪರ್ಪುಂಜ ಮಾರ್ಗವನ್ನು ಬಳಸುವುದು
- ಸುಳ್ಯ ಕಡೆಯಿಂದ ಬರುವ ಲಘು ವಾಹನಗಳು ಪರ್ಪುಂಜ ಕ್ರಾಸ್-ಪಂಜಳ-ಪುರುಷರಕಟ್ಟೆ-ದರ್ಬೆ-ಅರುಣಾ ಥಿಯೇಟರ್-ಸಾಲ್ಮರ ಪಡೀಲ್-ಬೋಳುವಾರ ಲಿನೆಟ್ ಜಂಕ್ಷನ್ ಮಾರ್ಗವಾಗಿ ಮಂಗಳೂರು ಕಡೆಗೆ ಸಂಚರಿಸುವುದು
ಪಾರ್ಕಿಂಗ್ ಸ್ಥಳದ ವಿವರಗಳು
ಕಾರ್ಯಕ್ರಮಕ್ಕೆ ಆಗಮಿಸುವವರು ಒಂದು ಗಂಟೆ ಮುಂಚಿತವಾಗಿಯೇ ವಾಹನಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ, ಬಂಟರ ಭವನ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು
ವಾಹನ ನಿಲುಗಡೆ ನಿಷೇಧದ ವಿವರಗಳು
ಮೇ 6 ರ ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವ ವರೆಗೆ ಶ್ರೀಧರ ಭಟ್ ಜಂಕ್ಷನ್ ನಿಂದ ಗಾಂಧಿಕಟ್ಟೆ ಹಾಗೂ ಗಾಂಧಿಕಟ್ಟೆಯಿಂದ ಕೋರ್ಟ್ ರಸ್ತೆ ಮೂಲಕ ಕಿಲ್ಲೆ ಮೈದಾನ ಹಾಗೂ ಕಿಲ್ಲೆ ಮೈದಾನದ ಸುತ್ತಮುತ್ತ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಿದೆ.