ಮೇ 7: ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೈಕ್ ರ‍್ಯಾಲಿ

Spread the love

ಮೇ 7: ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೈಕ್ ರ‍್ಯಾಲಿ

ಉಡುಪಿ ಕಾಂಗ್ರೆಸ್ ವಿಧಾನಸಭಾ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಪರವಾಗಿ ಮೇ 7ರಂದು ಭಾನುವಾರ ಮದ್ಯಾಹ್ನ 3.00 ಗಂಟೆಗೆ ಸರಿಯಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಬೃಹತ್ ಬೈಕ್ ರ್ಯಾಲಿಯು ಜರುಗಲಿದೆ.

ಮಧ್ಯಾಹ್ನ 3.00 ಗಂಟೆಯಿಂದ ಪಡುತೋನ್ಸೆ ಬೇಂಗ್ರೆಯ ರಾಮ ಭಜನಾ ಮಂದಿರದಿಂದ ಬೈಕ್ ರ್ಯಾಲಿಯು ಹೊರಟು ಹೂಡೆಯಿಂದ ಗುಜ್ಜರಬೆಟ್ಟು ಮಾರ್ಗವಾಗಿ ತೊಟ್ಟಂನಿಂದ ವಡಭಾಂಡೇಶ್ವರ ಸರ್ಕಲ್ನಿಂದ ರಾಜರಸ್ತೆಯ ಮೂಲಕ ಏಳೂರು ಮೊಗವೀರ ಸಭಾಭವನದ ಮಾರ್ಗವಾಗಿ ಕಲ್ಮಾಡಿ ಚರ್ಚ್ ಬಳಿ ಬೈಕ್ ರ್ಯಾಲಿ ಮುಗಿಸಿ ಸಂಜೆ 6.00 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯು ನಡೆಯಲಿದೆ.

ಸಭೆಗೆ ದಿಕ್ಸೂಚಿ ಭಾಷಣಗಾರರಾಗಿ ಯುವ ನಾಯಕರಾದ “ನಿಕೇತ್ ರಾಜ್ ಮೌರ್ಯ” ಅವರು ಭಾಗವಹಿಸಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here