ಮೈಸೂರಿಗೆ ಪ್ರವಾಸಿಗರ ದೌಡು… ಜನವೋ ಜನ…

Spread the love

ಮೈಸೂರಿಗೆ ಪ್ರವಾಸಿಗರ ದೌಡು… ಜನವೋ ಜನ…

ಮೈಸೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿರುವುದರಿಂದ ಜನಸಾಗರವೇ ಕಂಡು ಬರುತ್ತಿದೆ.

ನಗರದ ಬಸ್ ನಿಲ್ದಾಣ, ಕೇಂದ್ರೀಯ ಬಸ್ ನಿಲ್ದಾಣ, ಹಾಗೂ ರೈಲು ನಿಲ್ದಾಣವಿರುವ ಜೆಎಲ್‌ಬಿ ರಸ್ತೆ ಹಾಗೂ ಮೈಸೂರು ನಂಜನಗೂಡು, ಮೈಸೂರು ಎಚ್.ಡಿ.ಕೋಟೆ, ಮೈಸೂರು ಹುಣಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ರಾತ್ರಿ ವೇಳೆ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಮಧ್ಯಾಹದಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕೊಂಚವೇ ಏರಿಕೆಯಾಗುತ್ತಾ ರಾತ್ರಿ 7ರ ವೇಳೆಗೆ ಮೈಸೂರು, ನಂಜನಗೂಡು, ಎಚ್.ಡಿ.ಕೋಟೆ. ಹಾಗೂ ಹುಣಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಮಂದಗತಿಯಲ್ಲಿ ಸಾಗುವಂತಾಗಿದೆ. ದೀಪಾಲಂಕಾರವಿರುವುದರಿಂದ ಅರಮನೆ ಸುತ್ತಮುತ್ತಲ ರಸ್ತೆಗಳಲ್ಲಿ ಅಪಾರ ವಾಹನ ದಟ್ಟಣೆ ಕಂಡು ಬರುತ್ತಿದೆ.


Spread the love