ಮೈಸೂರಿನಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

Spread the love

ಮೈಸೂರಿನಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ

ಮೈಸೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗೌರಿ ಗಣೇಶ ಹಬ್ಬದ ಅಂಗವಾಗಿ ಆಟೋ ಚಾಲಕರಿಗಾಗಿ 250ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರವನ್ನು ವಿತರಿಸಲಾಯಿತು.

ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಶೆಣೈ ಅವರು ಆಟೋ ಚಾಲನೆ ಮಾಡುವ ಮೂಲಕ ಸಾಮಾನ್ಯ ಜನರ ಸೇವೆ ಮಾಡುತ್ತಿರುವ ಆಟೋ ಚಾಲಕರ ಸೇವೆ ಮೌಲ್ಯಯುತವಾಗಿದ್ದು, ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ಶ್ರಮಿಸುತ್ತಿರುವ ಚಾಲಕರು ಬಡವರ ಬಂಧುಗಳಾಗಿದ್ದಾರೆ. ಅಂತಹ ಸೇವೆಗೆ ಬೆಲೆಕಟ್ಟಲಾಗದು ಎಂದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಯಶಸ್ವಿನಿ ಸೋಮಶೇಖರ್ ಅವರು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವಜನಿಕ ಗಣೇಶೋತ್ಸವ ನೀಡಿದ ಕೊಡುಗೆ ಅಪಾರ ಬ್ರಿಟಿಷರ ವಿರುದ್ಧ ಇಡೀ ಸಮಾಜವನ್ನು ಜಾಗೃತಗೊಳಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕ ತಿಲಕರು ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಚದುರಿ ಹೋದ ಸಮಾಜವನ್ನು ಧಾರ್ಮಿಕವಾಗಿಯೂ ಸಂಘಟಿಸಬಹುದು ಎಂದು ತೋರಿಸಿಕೊಟ್ಟರು, ಏಕತೆಯನ್ನು ಸಾಧಿಸುವುದಕ್ಕೆ ಜನರನ್ನು ಸಮಾಜಮುಖಿಯನ್ನಾಗಿಸುವುದಕ್ಕೆ ಸಾರ್ವಜನಿಕ ಗಣೇಶೋತ್ಸವ ಅತ್ಯುತ್ತಮ ಸಾಧನೆ ಎಂಬುದನ್ನು ತೋರಿಸಿಕೊಟ್ಟರು ಎಂದು ಹೇಳಿದರು.

ಅಖಿಲೇಶ್, ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಹರೀಶ್ ನಾಯ್ಡು, ಗಣೇಶ್, ಶ್ಯಾಮ್, ಸುಚೀಂದ್ರ, ಆಟೋ ಚಾಲಕರಾದ ಅಶ್ವಥ್, ಮನು, ಪ್ರದೀಪ್, ನವೀನ ಮಹದೇಶ ಮೊದಲಾದವರು ಇದೇ ವೇಳೆ ಇದ್ದರು.


Spread the love