ಮೈಸೂರಿನಲ್ಲಿ ಇನ್ನೆರಡು ದಿನ ದೀಪಾಲಂಕಾರ ವಿಸ್ತರಣೆ

Spread the love

ಮೈಸೂರಿನಲ್ಲಿ ಇನ್ನೆರಡು ದಿನ ದೀಪಾಲಂಕಾರ ವಿಸ್ತರಣೆ

ಮೈಸೂರು: ಮೈಸೂರು ನಗರದಲ್ಲಿ ದಸರಾ ವೇಳೆ ಅಳವಡಿಸುವ ದೀಪಾಲಂಕಾರವನ್ನು ದಸರಾ ಕಳೆಯುತ್ತಿದ್ದಂತೆಯೇ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ದಸರಾ ಕಳೆದ ಬಳಿಕವೂ ಒಂದೆರಡು ದಿನಗಳ ಕಾಲ ವಿಸ್ತರಣೆ ಮಾಡಲಾಗುತ್ತಿದೆ. ಈ ಬಾರಿ ದಸರಾ ಕಳೆದ ಬಳಿಕವೂ ಒಂದು ವಾರಗಳ ಕಾಲ ವಿಸ್ತರಣೆ ಮಾಡಲಾಗಿದ್ದು ಇನ್ನೆರಡು ದಿನಗಳ ಕಾಲ ನಗರದಲ್ಲಿ ದೀಪಾಲಂಕಾರ ಇರಲಿದೆ.

ದಸರಾ ಕಳೆದ ಬಳಿಕವೂ ನಗರದಲ್ಲಿ ಪ್ರವಾಸಿಗರ ದಂಡು ಬೀಡು ಬಿಟ್ಟಿದ್ದು, ಸಂಜೆಯಾಗುತ್ತಿದ್ದಂತೆಯೇ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಜತೆಗೆ ನಗರದ ಜನ ಕೂಡ ಸಂಜೆಯಾಗುತ್ತಿದ್ದಂತೆಯೇ ನಗರದಲ್ಲಿ ಅಡ್ಡಾಡುತ್ತಾ ದೀಪಾಲಂಕಾರ ನೋಡಿ ಖುಷಿ ಪಡುತ್ತಿದ್ದಾರೆ. ದಸರಾ ಬಳಿಕ ಅ.10 ರವರೆಗೆ ದೀಪಾಲಂಕಾರ ಇರಲಿದೆ ಎಂದು ಹೇಳಲಾಗಿತ್ತು. ಇದೀಗ ಮೈಸೂರಿಗರಿಗೆ ಮತ್ತು ಮೈಸೂರಿಗೆ ಬರುವ ಪ್ರವಾಸಿಗರಿಗೆ ಇನ್ನೆರಡು ದಿನ ನಗರದ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಅವಕಾಶವನ್ನು ಸೆಸ್ಕಾಂ ಕಲ್ಪಿಸಿದೆ.

ದಸರಾ ಮಹೋತ್ಸವದ ಪ್ರಯುಕ್ತ ನಗರದಲ್ಲಿ ಮಾಡಲಾಗಿದ್ದ ವಿದ್ಯುತ್ ದೀಪಾಲಂಕಾರ ಉತ್ತಮ ಪ್ರತಿಕ್ರಿಯೆ ಮತ್ತು ಇನ್ನಷ್ಟು ದಿನಗಳ ಕಾಲ ಮುಂದುವರಿಸುವಂತೆ ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಇನ್ನು ಎರಡು ದಿನ ನಗರದ ಹೃದಯ ಭಾಗದಲ್ಲಿ ಮಾತ್ರ ವಿದ್ಯುತ್ ದೀಪಾಲಂಕಾರವನ್ನು ಮುಂದುವರೆಸಲಾಗುತ್ತಿದೆ. ಇದುವರೆಗೂ ಒಟ್ಟು ೧೭ ದಿನಗಳ ಕಾಲ ದೀಪಾಲಂಕಾರ ಆಯೋಜಿಸುವ ಮೂಲಕ ಸೋಮವಾರಕ್ಕೆ ಅಂತಿಮಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅರಮನೆ ಸುತ್ತಲಿನ ರಸ್ತೆಗಳು, ಚಾಮರಾಜ ಜೋಡಿ ರಸ್ತೆ, ಜೆಎಲ್ಬಿ ರಸ್ತೆಗಳಲ್ಲಿ ಹೆಚ್ಚು ಜನಸಂದಣಿ ಕಂಡು ಬಂತು. ಸಾಕಷ್ಟು ಜನರು ಸಂಭ್ರಮದಿಂದ ದೀಪಾಲಂಕಾರ ನೋಡುವಲ್ಲಿ ನಿರತರಾಗಿದ್ದರು.

ಈ ಕುರಿತು ಮಾತನಾಡಿದ ಸೆಸ್ಕಾಂ ಎಂಡಿ ಜಯವಿಭವಸ್ವಾಮಿ, ಎರಡು ದಿನ ಟ್ರಯಲ್ ಸೇರಿದಂತೆ ಇದುವರೆಗೂ 17 ದಿನ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸುಮಾರು 5 ಕೋಟಿ ರೂ. ವೆಚ್ಚವಾಗಿದೆ. ಸಾರ್ವಜನಿಕರಿಂದ ಇನ್ನಷ್ಟು ದಿನಗಳ ಕಾಲ ವೀಕ್ಷಣೆಗೆ ಅವಕಾಶ ನೀಡುವಂತೆ ಸಾಕಷ್ಟು ಒತ್ತಾಯ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದು, ಇನ್ನೆರಡು ದಿನಗಳ ಕಾಲ ನಗರದ ಹೃದಯ ಭಾಗದಲ್ಲಿ ಮಾತ್ರ ದೀಪಾಲಂಕಾರ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿ. ದ್ದಾರೆ.


Spread the love