ಮೈಸೂರಿನಲ್ಲಿ ಇಳಿಕೆಯಾಗದ ಕೊರೊನಾ ಸೋಂಕು:15 ಸಾವು

Spread the love

ಮೈಸೂರಿನಲ್ಲಿ ಇಳಿಕೆಯಾಗದ ಕೊರೊನಾ ಸೋಂಕು:15 ಸಾವು

ಮೈಸೂರು: ರಾಜ್ಯದಲ್ಲಿ ಬೆಂಗಳೂರು ನಂತರ ಮೈಸೂರಿನಲ್ಲಿ ಕೊರೊನಾ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗದಿರುವುದು ಆತಂಕ ತಂದಿದೆ.

ಲಾಕ್ ಡೌನ್ ನಿಯಮದಲ್ಲಿ ಒಂದಷ್ಟು ಸಡಿಲಿಕೆ ಮಾಡಿದ್ದು, ಜೂ.28ರಿಂದ ಕೆ ಎಸ್ ಆರ್ ಟಿಸಿ ಬಸ್ ಸಂಚಾರವೂ ಆರಂಭವಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಿದೆ. ಮೈಸೂರಿನಲ್ಲಿ ಭಾನುವಾರ 478 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,65,510 ಕ್ಕೇರಿದ್ದರೆ, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 4,653 ಕ್ಕೆ ಇಳಿಕೆಯಾಗಿದೆ. ಈ ಪೈಕಿ ಭಾನುವಾರ 660 ಕೊರೊ‌ನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದುವುದರೊಂದಿಗೆ ಮೈಸೂರಿನಲ್ಲಿ ಇದುವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದವರ ಸಂಖ್ಯೆ 1,58,712ಕ್ಕೇರಿದೆ. ಇನ್ನು ಇದುವರೆಗೆ 2,145 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಭಾನುವಾರ 3,604 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 89 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,34,630 ಕ್ಕೆ ಏರಿಕೆಯಾಗಿದೆ. ಭಾನುವಾರ 7,699ಮಂದಿ ಗುಣಮುಖರಾಗುವುದರೊಂದಿಗೆ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಸಂಖ್ಯೆ 26,98,822ಕ್ಕೇರಿದೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,01,042 ಕ್ಕೆ ಇಳಿಕೆಯಾಗಿದೆ., ರಾಜ್ಯದಾದ್ಯಂತ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 34,743ಕ್ಕೇರಿದೆ.

ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದರ ಮಾಹಿತಿ ನೋಡುವುದಾದರೆ, ಬಾಗಲಕೋಟೆ 07, ಬಳ್ಳಾರಿ 26, ಬೆಳಗಾವಿ 143, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 788, ಬೀದರ್ 08, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22, ದಕ್ಷಿಣಕನ್ನಡ 454, ದಾವಣಗೆರೆ 118, ಧಾರವಾಡ 46, ಗದಗ 18, ಹಾಸನ 322, ಹಾವೇರಿ 13, ಕಲಬುರಗಿ 36, ಕೊಡಗು 115, ಕೋಲಾರ 101, ಕೊಪ್ಪಳ 09, ಮಂಡ್ಯ 109, ಮೈಸೂರು 478, ರಾಯಚೂರು 19, ರಾಮನಗರ 15, ಶಿವಮೊಗ್ಗ 177, ತುಮಕೂರು 116, ಉಡುಪಿ 97, ಉತ್ತರಕನ್ನಡ 57, ವಿಜಯಪುರ 09, ಯಾದಗಿರಿ 04 ಪ್ರಕರಣಗಳು ದೃಢವಾಗಿವೆ.


Spread the love