ಮೈಸೂರಿನಲ್ಲಿ ಕಣ್ಣೀರಿಟ್ಟ ನಟಿ ರಾಖಿ ಸಾವಂತ್

Spread the love

ಮೈಸೂರಿನಲ್ಲಿ ಕಣ್ಣೀರಿಟ್ಟ ನಟಿ ರಾಖಿ ಸಾವಂತ್

ಮೈಸೂರು: ಇರಾನ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣ ಸಂಬಂಧ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಫೆ.27ರವರೆಗೆ ಪೊಲೀಸ್ ವಶಕ್ಕೆ ನೀಡಿ ಮೈಸೂರು ನ್ಯಾಯಾಲಯ ಆದೇಶಿಸಿದ್ದು, ಈ ನಡುವೆ ನಟಿ ರಾಖಿ ಸಾವಂತ್ ಮೈಸೂರಿನಲ್ಲಿ ರಾಖಿ ಕಣ್ಣೀರಿಟ್ಟಿದ್ದಾರೆ.

ಇನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಆದಿಲ್ ಖಾನ್ ದುರಾನಿಯನ್ನು ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರಿಪಡಿಸಿದ್ದರು. ಈ ಸಂಬಂಧ ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗಾಗಿ ಆದಿಲ್ ಖಾನ್ ದುರಾನಿಯನ್ನು ಕರೆದೊಯ್ದರು.

ವಿದ್ಯಾಭ್ಯಾಸಕ್ಕೆಂದು ನಗರದ ಖಾಸಗಿ ಫಾರ್ಮಸಿ ಕಾಲೇಜಿಗೆ ಬಂದಿರುವ ಇರಾನ್ ದೇಶದ 30 ವರ್ಷದ ಯುವತಿ ಆದಿಲ್ ಖಾನ್ ದುರಾನಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಳು.. ಆದಿಲ್ ಖಾನ್ ಪರಿಚಯ ಮಾಡಿಕೊಂಡು ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ ವಿ.ವಿ.ಪುರಂನಲ್ಲಿ ತಾನು ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ಇರಿಸಿಕೊಂಡು ಹಲವು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಳುರು.ಮದುವೆ ಆಗುವಂತೆ ಕಳೆದ ಐದು ತಿಂಗಳಿನಿಂದ ಒತ್ತಾಯ ಮಾಡಿದಾಗ ಅವಾಚ್ಯ ಪದಗಳಿಂದ ನಿಂದಿಸುವುದಲ್ಲದೇ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಳು

ಇರಾನಿ ಯುವತಿ ನೀಡಿದ ದೂರಿನ ಮೇರೆಗೆ ರಾಖಿ ಸಾವಂತ್ ಪತಿ ಆದಿಲ ಖಾನ್ ವಿರುದ್ಧ ಐಪಿಸಿ ಕಲಂ 376, 417, 420, 504, 506 ಅನ್ವಯ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾನು ಹಿಂದೂ ಎಂಬ ಕಾರಣಕ್ಕೆ ಒಪ್ಪತ್ತಿಲ್ಲ: ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಆತ ಕಾನೂನು ಬದ್ಧವಾಗಿ ಮದುವೆಯಾಗಿದ್ದೇನೆ. ಅದರ ಎ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಗ್ಗೆ ಆದಿಲ ಖಾನ್ ತಂದೆ ಜೊತೆ ಮಾತನಾಡಿದೆ. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ ಪಡೆದ ಹಣವನ್ನು ಹಿಂದಕ್ಕೆ ನೀಡಿಲ್ಲ. ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ್ದ. ಇದರಿಂದ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಸಿಗಲಿದೆ ಎಂದು ರಾಖಿ ಸಾವಂತ್ ತಿಳಿಸಿದರು.

ಈ ನಡುವೆ ತನ್ನ ಪತಿಯ ಪ್ರಕರಣದ ವಿಚಾರಣೆ ವೇಳೆ ರಾಖಿ ಸಾವಂತ್ ಕೂಡ ನ್ಯಾಯಾಲಯದ ಆವರಣದಲ್ಲಿ ಹಾಜರಾಗಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಲ್ ಖಾನ್ ದುರಾನಿಯನ್ನು ನಾನು ಕಾನೂನು ಬದ್ಧವಾಗಿ ಮದುವೆಯಾಗಿದ್ದೇನೆ. ಹಿಂದೂ ಆಗಿದ್ದವಳು ಅವನಿಗೋಸ್ಕರ ಮುಸ್ಲಿಂ ಧರ್ಮಕ್ಕೂ ಸೇರಿಕೊಂಡಿದ್ದೇನೆ. ಫಾತಿಮ ಎಂದು ಹೆಸರನ್ನೂ ಬದಲಿಸಿಕೊಂಡಿದ್ದೇನೆ. ನನ್ನಿಂದ ಸುಮಾರು 1.70 ಕೋಟಿ ರೂ. ಹಣ ಪಡೆದು ಹಣವನ್ನೂ ಕೊಡುತ್ತಿಲ್ಲ. ನನ್ನನ್ನು ಅವರ ಮನೆಯವರು ಮನೆಗೂ ಸೇರಿಸುತ್ತಿಲ್ಲ. ನಾನು ಎಲ್ಲಿಗೆ ಹೋಗಲಿ. ನನಗೆ ನ್ಯಾಯ ಕೊಡಿಸಿಕೊಡಿ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.

ನನ್ನ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಅವರನ್ನು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿzನೆ. ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.


Spread the love