ಮೈಸೂರಿನಲ್ಲಿ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಪ್ರದಾನ

Spread the love

ಮೈಸೂರಿನಲ್ಲಿ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಪ್ರದಾನ

ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮೈಸೂರು ಜಿಲ್ಲಾ ಪತ್ರಕರ್ತರ ಸಹಯೋಗದಲ್ಲಿ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ ಡಿ.ಉಮಾಪತಿ, ಗೊಮ್ಮಟ ಮಾಧ್ಯಮ ಪ್ರಶಸ್ತಿ ರವೀಂದ್ರ ಭಟ್ಟ, ಡಿವಿಜಿ ಪ್ರಶಸ್ತಿ ನಾಗಮಣಿ ಎಸ್.ರಾವ್, ಪಾಟೀಲ ಪುಟ್ಟಪ್ಪ ಪ್ರಶಸ್ತಿ ವಸಂತ ನಾಡಿಗೇರ, ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ ಅರುಣಕುಮಾರ್ ಹಬ್ಬು, ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ ಕೆ.ಎನ್.ರವಿ, ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ ಆರ್.ಎನ್.ಸಿದ್ಧಲಿಂಗಸ್ವಾಮಿ, ಅಭಿಮಾನಿ ಪ್ರಕಾಶನ ಪ್ರಶಸ್ತಿ ಸಿರಾಜ್ ಬಿಸರಳ್ಳಿ, ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ ಜಯತೀರ್ಥ ಪಾಟೀಲ್, ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ ಎಸ್.ಜಿ.ತುಂಗರೇಣುಕ. ಕಿಡಿ ಶೇಷಪ್ಪ ಪ್ರಶಸ್ತಿ ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ, ಪಿ.ಆರ್.ರಾಮಯ್ಯ ಪ್ರಶಸ್ತಿ ಮೊಹಮ್ಮದ ಬಾಷಾ ಗೂಳ್ಯಂ, ಪಿ.ರಾಮಯ್ಯ ಪ್ರಶಸ್ತಿ ಎಂ.ಜಿ.ಪ್ರ`ಕರ, ಗರುಡನಗಿರಿ ನಾಗರಾಜ್ ಪ್ರಶಸ್ತಿ ಎನ್.ಬಸವರಾಜ್, ಮಹದೇವ ಪ್ರಕಾಶ್ ಪ್ರಶಸ್ತಿ ಜಿ.ಆರ್.ಸತ್ಯಲಿಂಗರಾಜು, ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ ನಾಗರಾಜ ಶೆಣೈ, ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ ಡಿ.ಎನ್.ಶಾಂ`ವಿ, ಟಿ.ಕೆ.ಮಲಗೊಂಡ ಪ್ರಶಸ್ತಿ ನಾರಾಯಣ ಹೆಗಡೆ, ಆರ್.ಶಾಮಣ್ಣ ಪ್ರಶಸ್ತಿ (ಪುಟ ವಿನ್ಯಾಸ) ವಿಜಯ ಕರ್ನಾಟಕ, ಜಯಲಕ್ಷ್ಮೀ ಸಂಪತ್‌ಕುಮಾರ್, ಎಚ್.ಎನ್.ಆರತಿ, ಎಸ್.ಎಂ.ಜಂಬುಕೇಶ್ವರ, ಕೆ.ದೀಪಕ್ ವಿಶೇಷ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಸಂವಿಧಾನದ ಅಪವ್ಯಾಖ್ಯಾನ ಮತ್ತು ಅಪ್ರಸ್ತುತ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ ನಾಲ್ಕು ವರ್ಷಗಳ ಹಿಂದೆ ಸಂವಿಧಾನ ಬದಲಿಸುವ, ಈ ಸಂವಿಧಾನ ಪ್ರಯೋಜನವಿಲ್ಲ. ಸವಾಲು ಸಮಸ್ಯೆ ಪರಿಹರಿಸಲು ಸಮಸ್ಯೆ, ಸವಾಲುಗಳಿಗೆ ಸಂವಿಧಾನ ಕಾರಣ ಎಂದು ಕೇಳುತ್ತಿದ್ದೆವು. ಈಗ ಅಪಸ್ವರ ಹಿಂದಕ್ಕೆ ಹೋಗಿ ಅಪವ್ಯಾಖ್ಯಾನ ಮಾಡಲಾಗುತ್ತಿದೆ ಎಂದರು.

ಸಿಬಿಐ, ಇಡಿ, ಐಟಿಯಂತಹ ಸ್ವತಂತ್ರ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದವರ ಮೇಲೆ ದಾಳಿ ಮಾಡಲಾಗುತ್ತಿದೆ. 7 ವರ್ಷಗಳಲ್ಲಿ ಶೇ.95 ವಿರೋಧ ಪಕ್ಷಗಳ ನಾಯಕ ಮೇಲೆ ದಾಳಿ ಮಾಡಿದ್ದಾರೆ. ಹಾಗಾದರೆ ಆಳುವ ಪಕ್ಷದವರು ಸತ್ಯಹರಿಶ್ಚಂದ್ರರೇ ಎಂದು ಪ್ರಶ್ನಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಈಚಿನ ವರ್ಷಗಳಲ್ಲಿ ಕರ್ನಾಟಕದ ಹೆಸರು ಮೇಲಿರುತ್ತದೆಯೋ, ಕೆಳಗೆ ಇಳಿಯುತ್ತಿದ್ದೇಯೋ, ದಕ್ಷಿಣ ರಾಜ್ಯಗಳಲ್ಲಿ ಮುಂದಿದೆಯೋ ಹಿಂದಿದೆಯೋ? ಮಾಧಮ ನೈತಿಕವಾಗಿ ಅಚ್ಚುಕಟ್ಟಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದರೆ ರಾಜ್ಯ ಹಿಂದುಳಿಯುತ್ತಿತ್ತೇ? ಪತ್ರಕರ್ತರು ಆಲೋಚಿಸಬೇಕು ಎಂದರು.

ಮುಂದಿನ 3 ತಿಂಗಳು ಕರ್ನಾಟಕ ಮಾಧಮಕ್ಕೆ ಬಹಳ ಮುಖ್ಯ. ಕರ್ನಾಟಕ ಮತ್ತೊಂದು ಉತ್ತರ ಪ್ರದೇಶ, ಗುಜರಾತ್ ಆಗುವುದನ್ನು ತಪ್ಪಿಸುವ ಜವಾಬ್ದಾರಿ ಇದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹೇಳುವುದು ನಿಜವೋ, ಸುಳ್ಳೋ ಪತ್ತೆ ಮಾಡುವುದೇ ನಮ್ಮ ಕರ್ತವ್ಯವಾಗಬೇಕು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧಕ್ಷ ಶಿವಾನಂದ ತಗಡೂರು ಅಧಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಟಿ.ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೇಯರ್ ಶಿವಕುಮಾರ್, ಹೋಟೆಲ್ ಮಾಲೀಕರ ಸಂಘದ ಅಧಕ್ಷ ಸಿ.ನಾರಾಯಣಗೌಡ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ಮೊದಲಾದವರು ಇದ್ದರು.


Spread the love

Leave a Reply

Please enter your comment!
Please enter your name here