ಮೈಸೂರಿನಲ್ಲಿ ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್

Spread the love

ಮೈಸೂರಿನಲ್ಲಿ ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಏಕೀಕೃತ ಟಿಕೇಟ್ (ಕಾಂಬೋ ಟಿಕೆಟ್) ವ್ಯವಸ್ಥೆ ಜಾರಿಗೊಳಿಸಿದೆ.

ಏಕೀಕೃತ ಟಿಕೆಟ್ ಪಡೆಯುವುದರಿಂದ ಪ್ರವಾಸಿಗರು 5 ಪ್ರವಾಸಿ ಸ್ಥಳಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ ಹಾಗೂ ಕೆಆರ್‌ಎಸ್ ಬೃಂದಾವನಕ್ಕೆ ತೆರಳಬಹುದು. ಟಿಕೆಟ್ ಖರೀದಿಗೆ 5 ಸ್ಥಳಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ.

ಈ ವ್ಯವಸ್ಥೆ ಸೆ.20ರಂದು ಆರಂಭಗೊಂಡು ಅ.5ರವರೆಗೆ ಚಾಲ್ತಿಯಲ್ಲಿರುತ್ತದೆ. ಟಿಕೆಟ್ ಬೆಲೆ 500 ರೂ.ಗಳಾಗಿದ್ದು, ಮಕ್ಕಳಿಗೆ 250 ರೂ. ನಿಗಧಿಪಡಿಸಲಾಗಿದೆ. ಏಕೀಕೃತ ಟಿಕೆಟ್ ಅನ್ನು ಪ್ರವಾಸಿ ಇಲಾಖೆಯ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ಕೆಎಸ್‌ಟಿಡಿಇ ಹೋಟೆಲ್ ಹಾಗೂ ಟ್ರಾವೆಲ್ಸ್ ವಿಭಾಗದಲ್ಲಿ, ಕೆಎಸ್‌ಆರ್‌ಟಿಸಿ ಸಬರ್ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣದ 2 ಕಡೆ, ಚಾ.ಬೆಟ್ಟ, ಮೃಗಾಲಯ, ಕೆಆರ್‌ಎಸ್, ಅರಮನೆ ಹಾಗೂ ಮೈಸೂರು ನಗರದ ಪ್ರಮುಖ ಹೋಟೆಲ್‌ಗಳಲ್ಲಿ ಟಿಕೆಟ್ ಲಭ್ಯವಿರಲಿದೆ.


Spread the love

Leave a Reply

Please enter your comment!
Please enter your name here