ಮೈಸೂರಿನಲ್ಲಿ ಹಿಂದೂ-ಮುಸ್ಲಿಮರಿಂದ ಬಕ್ರೀದ್ ಆಚರಣೆ

Spread the love

ಮೈಸೂರಿನಲ್ಲಿ ಹಿಂದೂ-ಮುಸ್ಲಿಮರಿಂದ ಬಕ್ರೀದ್ ಆಚರಣೆ

ಮೈಸೂರು: ಕೃಷ್ಣರಾಜ ಯುವ ಬಳಗದ ವತಿಯಿಂದ ನಂಜುಮಳಿಗೆಯಲ್ಲಿರುವ ಗೋಪಾಲಸ್ವಾಮಿ ಉದ್ಯಾನವನದಲ್ಲಿ ಹಿಂದೂ ಮುಸಲ್ಮಾನರು  ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಬಕ್ರೀದ್ ಆಚರಿಸಿ ಸೌಹಾರ್ದತೆ ಮೆರೆದರು.

ಈ ವೇಳೆ ಮಾತನಾಡಿದ  ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ  ಅವರು ಕೋವಿಡ್-2 ನೇ ಅಲೆಯ ಲಾಕ್ ಡೌನ್  ಸಂದರ್ಭದಲ್ಲಿ ಸೌಹಾರ್ದತೆಯಲ್ಲಿ ಸಾಮಾಜಿಕ ಸೇವೆ, ನಿರಾಶ್ರಿತರಿಗೆ ಆಹಾರ, ದಿನಸಿ ಕಿಟ್ ಹಾಗೂ ಆಕ್ಸಿಜನ್ ಸೇರಿದಂತೆ ಇನ್ನಿತರ ಸೇವಾ ಕಾರ್ಯದಲ್ಲಿ ಮುಸಲ್ಮಾನ ಬಾಂಧವರು ನಮ್ಮೊಡನೆ ಸೇರಿ ಸೇವಾ ಕಾರ್ಯ ಮಾಡಿರುವುದು  ಶ್ಲಾಘನೀಯ.  ಹಾಗೆಯೇ ತ್ಯಾಗ ಮತ್ತು ಬಲಿದಾನದ ಹಬ್ಬ ವೆಂದೇ ಕರೆಯಲಾಗುವ ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್ ಮುಸಲ್ಮಾನ್ ಬಾಂಧವರು ಉತ್ಸಾಹ ಮತ್ತು ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯ ಬೆರೆತು ಆಚರಿಸುತ್ತಾರೆ ಎಂದರು.

ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು ಎಂದರು.

ಕಾಂಗ್ರೆಸ್ ಯುವ ಮುಖಂಡ ನವೀನ್ ಕೆಂಪಿ, ಕೃಷ್ಣರಾಜ ಯುವ ಬಳಗದ ತೀರ್ಥಕುಮಾರ್, ಪಾಂಡು ನಾರಾಯಣ್, ಮಹೇಶ್, ರವಿಕುಮಾರ್, ಅನಿಲ್, ಇರ್ಫಾನ್ ಖಾನ್, ಇಮ್ರಾನ್ ಖಾನ್, ಅಯಾಜ್, ಶೌಕತ್, ರಹೀಮ್ ಪಾಷಾ ,ವಸೀಮ್ ಪಾಷಾ ,ಹಾಗೂ ಇನ್ನಿತರರು ಹಾಜರಿದ್ದರು


Spread the love