ಮೈಸೂರಿನ ಆಲನಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Spread the love

ಮೈಸೂರಿನ ಆಲನಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಮೈಸೂರು: ವರ್ಲ್ಡ್‌ ಕ್ಲೀನ್‌ ಅಪ್‌ ಡೇ ಅಂಗವಾಗಿ ಶನಿವಾರ ಲೆಟ್ಸ್‌ ಡೂ ಇಟ್‌ ಮೈಸೂರು ಸಂಸ್ಥೆಯ ವತಿಯಿಂದ ಮೈಸೂರು ಮಹಾನಗರಪಾಲಿಕೆ, ಜಿಮ್‌ ಅಸೋಸಿಯೇಶನ್‌,‌ ಮೈಸೂರು ಫಾರ್ಮಾ ಫೋರಂ, ಮೊಬೈಲ್ ಪ್ಯಾಲೆಸ್‌, ಸ್ಕಾಲ್‌ ಇಂಟರ್‌ನ್ಯಾಷನಲ್‌, ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌, ಡಾಮಿನೋಸ್‌, ಡೆಕಾ ಸಹಯೋಗದೊಂದಿಗೆ ಆಲನಹಳ್ಳಿ ಮುಖ್ಯರಸ್ತೆಯನ್ನು ಸ್ವಚ್ಛಗೊಳಿಸಲಾಯಿತು. 200ಕ್ಕೂ ಹೆಚ್ಚು ಸ್ವಯಂಸೇವಕರು ಸೇರಿ ರಸ್ತೆಯನ್ನು ಸ್ವಚ್ಛಗೊಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್‌, ಶಾಸಕರಾದ ಎಸ್.ಎ.ರಾಮದಾಸ್‌, ಮಹಾಪೌರರಾದ ಶಿವಕುಮಾರ್‌, ಉಪಮಹಾಪೌರರಾದ ಡಾ.ಜಿ.ರೂಪ ಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಶಾಸಕರಾದ ಎಸ್.ಎ.ರಾಮದಾಸ್‌ ಮಾತನಾಡಿ, ನಮ್ಮ ಮೈಸೂರು ನಗರಿಯನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಲೆಟ್ಸ್‌ ಡೂ ಇಟ್‌ ಮೈಸೂರು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಕಳೆದ 10 ವರ್ಷಗಳ ಹಿಂದೆ ʻಬಿಗ್‌ ಡೇʼ ಎಂಬ ಬೃಹತ್‌ ಅಭಿಯಾನವೊಂದನ್ನು ಮಾಡಿ ಇದೇ ತಂಡ ಇಡೀ ಮೈಸೂರನ್ನು ಸ್ವಚ್ಛಗೊಳಿಸಿತ್ತು. ಅದಾದ ನಂತರ ಸ್ವಚ್ಛ ಭಾರತ ಅಭಿಯಾನ ಆರಂಭವಾಯಿತು. ಈಗ ಮತ್ತೆ ಅದೇ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನ ಈ ಕಾರ್ಯಕ್ರಮ ನಡೆಯುತ್ತಿರುವುದು ಒಳ್ಳೆಯ ವಿಚಾರ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಆಲನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕಸದ ಸಮಸ್ಯೆಯನ್ನು ಆಲಿಸಿದರು. ಇದನ್ನು ತಪ್ಪಿಸಲು ಹೆಚ್ಚುವರಿ ವಾಹನ, ಸಿಬ್ಬಂದಿ ಬೇಕಾಗುತ್ತದೆಯೇ ಎಂದು ವಿಚಾರಿಸಿ ಅದನ್ನು ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು. ಉಪಮಹಾಪೌರರಾದ ಡಾ.ಜಿ.ರೂಪ ಮಾತನಾಡಿ, ಮೈಸೂರಿನ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಈ ರಸ್ತೆಯಲ್ಲಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್‌, ಮೈಸೂರು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಜಿ.ನಾಗರಾಜ್, ಲೆಟ್ಸ್‌ ಡೂ ಇಟ್‌ ಮೈಸೂರು ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪ್ರಶಾಂತ್‌, ಎ.ಸುಧೀಂದ್ರ, ಭಾಷ್ಯಂ ಶ್ರೀನಿವಾಸ್‌, ಮೊಬೈಲ್‌ ಪ್ಯಾಲೆಸ್‌ ಮಾಲೀಕ ರಘು ಎನ್.ಪಿ., ಮೈಸೂರು ಟ್ರಾವಲ್ಸ್‌ ಅಸೋಸಿಯೇಶನ್‌ನ ಅಶೋಕ್‌, ಸಿ.ಎ.ಜಯಕುಮಾರ್‌ ಮತ್ತಿತರರು ಹಾಜರಿದ್ದರು.


Spread the love

Leave a Reply

Please enter your comment!
Please enter your name here