ಮೈಸೂರಿನ ಸರಗೂರಲ್ಲಿ ಸೈನಿಕ ಶಾಲೆ ಆರಂಭ

Spread the love

ಮೈಸೂರಿನ ಸರಗೂರಲ್ಲಿ ಸೈನಿಕ ಶಾಲೆ ಆರಂಭ

ಮೈಸೂರು: ಮೈಸೂರು ಜಿಲ್ಲೆಗೆ ಸೈನಿಕ ಶಾಲೆ ಅಗತ್ಯವಿತ್ತು. ಅದನ್ನು ಎಸ್ ವಿ ವೈ ಎಂ(ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ) ಸ್ಥಾಪಿಸಿದ್ದು, ಸೈನಿಕ ಶಾಲೆಯಲ್ಲಿ ಕಲಿಯಬೇಕೆಂಬ ಹಲವು ಮಕ್ಕಳ ಬಯಕೆ ಈಡೇರುವ ಕಾಲ ಸನ್ನಿಹಿತವಾಗಿದೆ.

ಹಾಗೆನೋಡಿದರೆ ಎಸ್ ವಿ ವೈ ಎಂ ಈ ಸಂಸ್ಥೆ ಸರಗೂರಿನಲ್ಲಿ 1984 ರಲ್ಲಿ ಸರಗೂರು ಪಟ್ಟಣದಲ್ಲಿ ವಿವೇಕ ಆಸ್ಪತ್ರೆ ಆರಂಭಿಸಿತು. ಆ ನಂತರ 2002 ರಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಅಡಿಯಲ್ಲಿ ವಿವೇಕ ಸ್ಕೂಲ್ ಅಪ್ ಎಕ್ಸಲೆನ್ಸ್ ಡಾ. ಆರ್ ಬಾಲಸುಬ್ರಹ್ಮಣ್ಯಂ ರವರ ನೇತೃತ್ವದಲ್ಲಿ ಆರಂಭಗೊಂಡಿತು. ಮುಂದುವರೆದ ಭಾಗವಾಗಿ ಇಲ್ಲೇ ಸೈನಿಕ ಶಾಲೆ ಪ್ರಾರಂಭವಾಗುತ್ತಿರುವುದು ವಿಶೇಷವಾಗಿದೆ.

ಸೈನಿಕ ಶಾಲೆಯ ಪ್ರವೇಶಕ್ಕೆ ರಕ್ಷಣಾ ಸಚಿವಾಲಯದ ಸೈನಿಕ ಶಾಲೆ ಸೊಸೈಟಿಯು ಈ ವರ್ಷದ ಜನವರಿಯಲ್ಲಿ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ನಡೆಸಿತ್ತು. ವಿವೇಕ ಸ್ಕೂಲ್ ಅಫ್ ಎಕ್ಸಲೆನ್ಸ್ ಶಾಲೆಯಲ್ಲಿ ಓದುತ್ತಿರುವ 26 ಮಕ್ಕಳು ಸೇರಿದಂತೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ಇತರ 24 ಮಕ್ಕಳಿಗೆ (ಒಟ್ಟು 50 )ಇಲ್ಲಿ 6 ನೇ ತರಗತಿಗೆ ಪ್ರವೇಶ ಸಿಗಲಿದೆ.

ಶಾಲೆಯಲ್ಲಿ ಸಿಬಿಎಸ್ಇ ಮಾದರಿಯಲ್ಲಿ ಪಠ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ರ ತನಕ ಪಠ್ಯದ ಚಟುವಟಿಕೆಗಳು ಇರುತ್ತದೆ. ನಂತರ 2.30 ರಿಂದ ಸೈನಿಕ ಶಾಲೆಗಳಲ್ಲಿ ನಡೆಯುವಂತೆ ಇಲ್ಲೂ ಚಟುವಟಿಕೆ ನಡೆಸಲಾಗುತ್ತದೆ, ದೇಶದ ವಿವಿಧೆಡೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರಲಿದ್ದಾರೆ. ಅವರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಕೂಡ ಇರಲಿದೆ.

ಇನ್ನು ಸರಗೂರಿನಲ್ಲಿ ವಿವೇಕಾನಂದ ಆಸ್ಪತ್ರೆ ನೆಲೆಗೊಳ್ಳಲು ಸರಗೂರಿನ ವರ್ತಕರ ಸಂಘ ಹಾಗೂ ಲಯನ್ ಸಂಸ್ಥೆಯೇ ಕಾರಣ ಅಂದರೆ ಸುಮಾರು 25 ವರ್ಷಗಳ ಹಿಂದೆ ಕಣ್ಣಿನ ಆಸ್ಪತ್ರೆಗೆಂದು ಲಯನ್ ಸಂಸ್ಥೆಯವರು ಹಾಗೂ ವರ್ತಕ ಸಂಘದವರು ನಿವೇಶನವನ್ನು ತೆಗೆದುಕೊಂಡಿದ್ದು ಅದು ಕಣ್ಣಿನ ಆಸ್ಪತ್ರೆ ಮಾಡದೆ, ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯವರು ವಹಿಸಿಕೊಂಡು ಈ ನಿವೇಶನದ ಕಟ್ಟಡದಲ್ಲಿ ಆಸ್ಪತ್ರೆ ನಡೆಸುತ್ತಿದ್ದರು.

ಕಾರಣಾಂತರದಿಂದ ಬಿಟ್ಟಿದ್ದು ಇದನ್ನು ವಿವೇಕಾನಂದ ಸಂಸ್ಥೆಯವರ ಜೊತೆ ಮಾತನಾಡಿ ಇವರ ಸಂಸ್ಥೆಯಿಂದ ಕೆಂಚನಳ್ಳಿಯಲ್ಲಿ ನಡೆಸುತ್ತಿದ್ದ ಆಸ್ಪತ್ರೆಯನ್ನು ಸರಗೂರಿಗೆ ವರ್ಗಾಯಿಸಲಾಯಿತು, ಇವರು ಈ ಸ್ಥಳದಲ್ಲಿ ಆಸ್ಪತ್ರೆ ನಡೆಸುತ್ತಿದ್ದರು, ಕಾಲಕ್ರಮೇಣ ಇಲ್ಲಿ ನಡೆಯುತ್ತಿದ್ದ ಆಸ್ಪತ್ರೆಯನ್ನು ಈಗಿರುವ ವಿವೇಕಾನಂದ ಆಸ್ಪತ್ರೆಯ ಆವರಣಕ್ಕೆ ಸ್ಥಳಾಂತರಿಸಲಾಯಿತು. ಅಂದರೆ ಆಸ್ಪತ್ರೆ ನಿವೇಶನವನ್ನು ಸರಗೂರಿನ ಮೈರಾಡ ಸಂಸ್ಥೆಯವರು ಸುಮಾರು ಮೂರುವರೆ ಎಕರೆ ಯಷ್ಟು ಖಾಲಿ ನಿವೇಶನವನ್ನು ಉಚಿತವಾಗಿ ವಿವೇಕಾನಂದ ಸಂಸ್ಥೆಗೆ ನೀಡಿದರು. ಸಂಸ್ಥೆಯವರು ತದ ನಂತರ ಆಸ್ಪತ್ರೆಗೆ ಕೊಟ್ಟಿದ್ದ ನಿವೇಶನವನ್ನು ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೆ ವಸತಿ ಗೃಹಗಳಾಗಿ ಮಾರ್ಪಡಿಸಲಾಯಿತು.


Spread the love

Leave a Reply

Please enter your comment!
Please enter your name here