ಮೈಸೂರು ಆರ್ ಬಿಐ ಬಳಿ ಬೋನಿಗೆ ಬಿದ್ದ ಚಿರತೆ

Spread the love

ಮೈಸೂರು ಆರ್ ಬಿಐ ಬಳಿ ಬೋನಿಗೆ ಬಿದ್ದ ಚಿರತೆ

ಮೈಸೂರು: ಆಗಾಗ್ಗೆ ಕಾಣಿಸಿಕೊಂಡು ಸಾಕುಪ್ರಾಣಿ ಮತ್ತು ಜನರಿಗೆ ಕಂಟಕವಾಗಿದ್ದ ಚಿರತೆ ಕೊನೆಗೂ ಬೋನಿಗೆ ಬೀಳುವುದರೊಂದಿಗೆ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.

ತಾಲೂಕಿನ ಶ್ಯಾದನಹಳ್ಳಿಯ ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಂಪಸ್ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಆರ್ ಬಿಐ ಹಿಂಭಾಗದಲ್ಲಿರುವ ತೋಟದಲ್ಲಿ ಬೋನನ್ನು ಇರಿಸಲಾಗಿತ್ತು. ಈ ಬೋನಿಗೆ ಇದೀಗ ಮೂರು ವರ್ಷದ ಗಂಡು ಚಿರತೆ ಬಿದ್ದಿದೆ.

ಬೋನನ್ನು ಇಲಾಖೆಯು ವಾರದ ಹಿಂದೆಯಷ್ಟೇ ಇರಿಸಿತ್ತು. ಇದೀಗ ಬೋನಿಗೆ ಬಿದ್ದಿದ್ದು ಈ ವ್ಯಾಪ್ತಿಯ ಜನ ನೆಮ್ಮದಿಪಡುವಂತಾಗಿದೆ. ಸೆರೆ ಸಿಕ್ಕ ಚಿರತೆಯನ್ನು ಆರ್‌ಎಫ್‌ಒ ಕೆ.ಸುರೇಂದ್ರ ನೇತೃತ್ವದ ಸಿಬ್ಬಂದಿ ಅರಣ್ಯ ಪ್ರದೇಶಕ್ಕೆ ರವಾನಿಸಿದರು. ವರ್ಷದ ಹಿಂದೆ ಆರ್‌ಬಿಐ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ. ಆದರೆ ಈಗ ಚಿರತೆ ಸೆರೆಸಿಕ್ಕಿರುವುದು ಜನ ನೆಮ್ಮದಿಯಿಂದ ಓಡಾಡುವಂತಾಗಿದೆ.


Spread the love