ಮೈಸೂರು ಡಿಸಿಪಿ ಎಂ.ಮುತ್ತುರಾಜ್ ಅಧಿಕಾರ ಸ್ವೀಕಾರ

Spread the love

ಮೈಸೂರು ಡಿಸಿಪಿ ಎಂ.ಮುತ್ತುರಾಜ್ ಅಧಿಕಾರ ಸ್ವೀಕಾರ

ಮೈಸೂರು: ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಎಂ.ಮುತ್ತುರಾಜ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಗುಪ್ತಚರ ವಿಭಾಗದ ಎಸ್‌ಪಿಯಾಗಿ ಕೆಲಸ ಮಾಡುತ್ತಿದ್ದ ಎಂ.ಮುತ್ತುರಾಜ್ ಅವರನ್ನು, ರಾಜ್ಯ ಸರಕಾರ ಬುಧವಾರ ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿಯಾಗಿ ಗುರುವಾರ ಎಂ.ಮುತ್ತುರಾಜ್ ಅವರು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಮುತ್ತುರಾಜ್ ಅವರು, ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾಗಿದ್ದರು. ಮತ್ತೆ ಈಗ ಅದೇ ಹುದ್ದೆಗೆ ವರ್ಗಾವಣೆಯಾಗಿ ಬಂದಿದ್ದಾರೆ.


Spread the love