ಮೈಸೂರು ಡಿಸಿ ರೋಹಿಣಿ ಸಿಂಧೂರಿ-ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವರ್ಗಾವಣೆ

Spread the love

ಮೈಸೂರು ಡಿಸಿ ರೋಹಿಣಿ ಸಿಂಧೂರಿ-ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ವರ್ಗಾವಣೆ

ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿದ್ದ ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತೆ ನಡುವಿನ ಸಮರಕ್ಕೆ ವರ್ಗಾವಣೆ ಮೂಲಕ ಸರ್ಕಾರ ತೆರೆ ಎಳೆದಿದೆ. ಸದ್ಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ರನ್ನು ವರ್ಗಾವಣೆ ಮಾಡಿ ಶನಿವಾರ ತಡರಾತ್ರಿ ಸರ್ಕಾರ ಆದೇಶ ಹೊರಡಿಸಿದೆ.

ರೋಹಿಣಿ ಸಿಂಧೂರಿ ಅವರಿಂದ ತೆರವಾದ ಸ್ಥಾನಕ್ಕೆ ಡಾ. ಬಗಾದಿ ಗೌತಮ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನು ಆಯುಕ್ತೆ ಶಿಲ್ಪಾ ನಾಗ್ ಬದಲಿಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷ್ಮೀಕಾಂತ್ ರೆಡ್ಡಿ ನೇಮಕಗೊಂಡಿದ್ದಾರೆ ರೋಹಿಣಿ ಸಿಂಧೂರಿಯನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದರೆ, ಶಿಲ್ಪಾನಾಗ್‌ರನ್ನು ನಿರ್ದೇಶಕರು (ಇ-ಆಡಳಿತ) ಆರ್‌ಡಿ&ಪಿಆರ್, ಬೆಂಗಳೂರು ಹುದ್ದೆಗೆ ನೇಮಕ ಮಾಡಲಾಗಿದೆ

ಇನ್ನು 2020ರಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗುವ ಮೊದಲು ರೋಹಿಣಿ ಇದೇ ಇಲಾಖೆಯ ಆಯುಕ್ತರಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದ. ಮೈಸೂರು: ಶಿಲ್ಪಾನಾಗ್ ಆರೋಪಕ್ಕೆ ರೋಹಿಣಿ ಸಿಂಧೂರಿ ಮೊದಲ ಬಾರಿ ಪ್ರತಿಕ್ರಿಯೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಂಡಿಯಾಗಿದ್ದ ಲಕ್ಷ್ಮೀಕಾಂತ್ ರೆಡ್ಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಡಾ. ಬಗಾದಿ ಗೌತಮ್ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತಾಗಿದ್ದರು. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 4ನೇ ಬಾರಿಗೆ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿದೆ.

ಕಳೆದ ಒಂದೆರಡು ದಿನಗಳಿಂದ ಮೈಸೂರು ಇಡೀ ರಾಜ್ಯದ ಕೇಂದ್ರ ಬಿಂದುವಾಗಿತ್ತು. ಪಾಲಿಕೆ ಆಯುಕ್ತೆ ಮತ್ತು ಜಿಲ್ಲಾಧಿಕಾರಿ ನಡುವಿನ ಜಟಾಪಟಿ ತಾರಕ್ಕೇರಿ ರಾಜೀನಾಮೆಯ ಪ್ರಹಸನವೂ ನಡೆದಿತ್ತು. ಸದ್ಯ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇಲ್ಲಿಗೆ ಎಲ್ಲವೂ ಮುಗಿಯಿತು ಎನ್ನಲಾಗುವುದಿಲ್ಲ. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಮೇಲೆ ಒಬ್ಬರ ಮೇಲೊಬ್ಬರಂತೆ ಜನಪ್ರತಿನಿಧಿಗಳು ಆರೋಪ ಮಾಡುವುದಕ್ಕೆ ಪ್ರಾರಂಭಿಸಿದ್ದು ಯಾವಾಗ ಸುಖಾಂತ್ಯ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Spread the love