ಮೈಸೂರು: ದಂಡ ಹಾಕಲು ಹಿಡಿದ ಪೊಲೀಸ್: ವ್ಯಾನ್​  ಹರಿದು ಬೈಕ್ ಸವಾರ ಸಾವು, ಪೊಲೀಸರಿಗೆ ಥಳಿತ

Spread the love

ಮೈಸೂರು: ದಂಡ ಹಾಕಲು ಹಿಡಿದ ಪೊಲೀಸ್: ವ್ಯಾನ್​  ಹರಿದು ಬೈಕ್ ಸವಾರ ಸಾವು, ಪೊಲೀಸರಿಗೆ ಥಳಿತ

ಮೈಸೂರು: ದಂಡ ಹಾಕುವಾಗ ನಿಲ್ಲಿಸದ ಬೈಕ್ ಸವಾರನಿಗೆ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದು ಹಿಂಬದಿಯಿಂದ ವ್ಯಾನ್​ ವೊಂದು ಹರಿದು ಸಾವಿಗೀಡಾಗಿರುವ ಘಟನೆ ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ.

ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಎಚ್.ಡಿ. ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ ಸಿವಿಲ್ ಇಂಜಿನಿಯರ್ ದೇವರಾಜು (46) ಮೃತಪಟ್ಟವರು.

ರಿಂಗ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಡ್ಡಗಟ್ಟಿದಾಗ ದೇವರಾಜು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ಬರುತ್ತಿದ್ದ ವ್ಯಾನ್​ ವೊಂದು ಅವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಗರುಡಾ ವಾಹನದ ಚಾಲಕ ಮಂಜುನಾಥ್, ವಿವಿಪುರಂ ಸಂಚಾರ ವಿಭಾಗದ ಎಎಸ್ಐ ಸ್ವಾಮಿನಾಯಕ್ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಗರುಡ ವಾಹನವನ್ನೂ ಉರುಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದ್ರಿಕ್ತ ಸಾರ್ವಜನಿಕರಿಂದ ಮೂವರು ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಪೊಲೀಸ್ ವಾಹನ ಸಂಪೂರ್ಣ ಜಖಂಗೊಂಡಿದೆ.


Spread the love