ಮೈಸೂರು ದಸರಾದಲ್ಲಿ ಕೊಡಗು ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

Spread the love

ಮೈಸೂರು ದಸರಾದಲ್ಲಿ ಕೊಡಗು ಸ್ತಬ್ಧಚಿತ್ರಕ್ಕೆ ಪ್ರಥಮ ಸ್ಥಾನ

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಭಾಗವಹಿಸಿ ರಾಜ್ಯದ ಐತಿಹಾಸಿಕ ಹಿನ್ನೆಲೆ, ಪರಂಪರೆ ತಿಳಿಸಿದ ಸ್ತಬ್ಧಚಿತ್ರಗಳಲ್ಲಿ ಕೊಡಗು ಜಿಲ್ಲೆಯ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ ಸ್ತಬ್ಧಚಿತ್ರಗಳು ಸೇರಿದಂತೆ ೪೭ ಸ್ತಬ್ಧಚಿತ್ರಗಳ ಭಾಗವಹಿಸಿದ್ದವು. ಅದರಲ್ಲಿ ಕೊಡಗಿನ ಸಂಸ್ಕೃತಿ ಪರಂಪರೆ ಬಿಂಬಿಸಿದ ಸ್ತಬ್ಧಚಿತ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮೈಸೂರಿನ ವಿಶೇಷತೆಗಳನ್ನು ಪ್ರತಿಬಿಂಬಿಸಿದ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ದೊರೆತಿದ್ದು, ಚಿತ್ರದುರ್ಗದ ಸ್ತಬ್ಧಚಿತ್ರ ಮೂರನೇ ಸ್ಥಾನ ಪಡೆದುಕೊಂಡಿದೆ. ಚಿಕ್ಕಮಗಳೂರು, ತುಮಕೂರು, ವಿಜಯಪುರ ಹಾಗೂ ಸ್ತಬ್ಧಚಿತ್ರ ಉಪಸಮಿತಿಯ ಸೋಮನಾಥಪುರ ದೇವಸ್ಥಾನದ ಸ್ತಬ್ಧಚಿತ್ರಕ್ಕೆ ಸಮಾಧಾನಕರ ಬಹುಮಾನ ಲಬಿಸಿದೆ.

ನಿಗಮ ಮಂಡಳಿ ಹಾಗೂ ವಿವಿಧ ಇಲಾಖೆಗಳಿಂದ ತಯಾರಿಸಲಾಗಿದ್ದ ಸ್ತಬ್ಧಚಿತ್ರಗಳಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ, ಕೆಎಂಎಫ್ ನಂದಿನಿ ಕ್ಷೀರಧಾರೆಯ ಉತ್ಪನ್ನಗಳ ಸ್ತಬ್ಧಚಿತ್ರಕ್ಕೆ 2ನೇ ಬಹುಮಾನ ಹಾಗೂ ಲಿಡ್ಕರ್ ಉತ್ಪನ್ನಗಳ ಸ್ತಬ್ಧಚಿತ್ರಕ್ಕೆ ಮೂರನೇ ಬಹುಮಾನ ದೊರೆತಿದೆ.


Spread the love