ಮೈಸೂರು ದಸರಾ ಆಹಾರ ಮೇಳ ಶುರು

Spread the love

ಮೈಸೂರು ದಸರಾ ಆಹಾರ ಮೇಳ ಶುರು

ಮೈಸೂರು: ಪಾರಂಪರಿಕ ತಿನಿಸು, ಬುಡಕಟ್ಟು ಶೈಲಿಯ ಬಂಬೂ ಬಿರಿಯಾನಿ, ಬಿದಿರಕ್ಕಿ ಪಾಯಸ, ಸಿರಿಧಾನ್ಯಗಳ ಉಪಹಾರದ ಜತೆಗೆ ವಿವಿಧ ಜಿಲ್ಲೆಗಳ ತಿನಿಸುಗಳು ಒಂದೇ ಸೂರಿನಲ್ಲಿ ದೊರೆಯುವ ಆಹಾರ ಮೇಳ ಆರಂಭವಾಗಿದ್ದು, ಬಂಬೂ ಬಿರಿಯಾನಿ ಮಾಂಸಹಾರಿಗಳ ಗಮನಸೆಳೆಯುತ್ತಿದೆ.

ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ನಗದರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ದಸರ ಆಹಾರ ಮೇಳದಲ್ಲಿ 114 ಮಳಿಗೆಗಳಲ್ಲಿ ಮೈಸೂರು, ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ಕೇರಳ, ಆಂಧ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳ ವಿಶೇಷ ಖಾದ್ಯಗಳನ್ನು ಆಹಾರ ಪ್ರಿಯರು ಸವಿದರು. ಇದರ ಜೊತೆಗೆ ಹತ್ತಾರು ಮಳಿಗೆಗಳಲ್ಲಿ ಹಣ್ಣಿನಿಂದ ತಯಾರಿಸಿದ ತಂಪು ಪಾನೀಯ, ಚಾಕೊಲೇಟ್, ಸಾಂಪ್ರದಾಯಿಕ ಸಿಹಿ ತಿಂಡಿಗಳು ಹಾಗೂ ಸಿರಿಧಾನ್ಯ ಆಹಾರಗಳು ಮೇಳದಲ್ಲಿ ಕಾಣಸಿಗುತ್ತಿವೆ.

ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಹಾಗೂ ಸಿದ್ಧಾರ್ಥನಗರದಲ್ಲಿ ಎರಡು ಕಡೆ ದಸರಾ ಆಹಾರ ಮೇಳ ಆಯೋಜಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ 114 ಮಳಿಗೆಗಳನ್ನು ತೆರೆದಿದ್ದರೆ, ಸಿದ್ಧಾರ್ಥನಗರ ಬಡಾವಣೆಯಲ್ಲಿ 74 ಮಳಿಗೆಗಳನ್ನು ತೆರೆಯಲಾಗಿದೆ.


Spread the love