ಮೈಸೂರು ದಸರಾ ಮೆಚ್ಚಿದ ಪ್ರಧಾನಿ ಮೋದಿ

Spread the love

ಮೈಸೂರು ದಸರಾ ಮೆಚ್ಚಿದ ಪ್ರಧಾನಿ ಮೋದಿ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಬುಧವಾರ ಮುಕ್ತಾಯಗೊಂಡಿದೆ. ಬುಧವಾರ ನಡೆದ ಜಂಬೂ ಸವಾರಿ, ಮತ್ತು ಪಂಜಿನ ಕವಾಯತು ಕಾರ್ಯಕ್ರಮಗಳೊಂದಿಗೆ ನಂತರ ಈ ಬಾರಿಯ ದಸರಾಕ್ಕೆ ವಿದಾಯ ಹೇಳಲಾಗಿದೆ. ಈ ಬಾರಿಯ ದಸರಾ ವೈಭವವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದಾರೆ.

ಈ ಬಾರಿಯ ಮೈಸೂರು ದಸರಾ ಅದ್ಭುತವಾಗಿತ್ತು. ತಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವ ಮೈಸೂರು ಜನತೆಯನ್ನು ನಾನು ಶ್ಲಾಘಿಸುತ್ತೇನೆ. ಈ ಬಾರಿಯ ಯೋಗ ದಿನದಂದು ನಾನು ಮೈಸೂರಿಗೆ ಭೇಟಿ ನೀಡಿದ್ದೆ. ಮೈಸೂರಿನ ಜನರೊಂದಿಗೆ ಬೆರೆಯುವ ಅವಕಾಶ ನನಗೆ ಒದಗಿತ್ತು ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಕರ್ನಾಟಕದ ಹೊಸನಗರದವರಾದ ನಿವಾನೆ ಕಲಾನಾಥ್ ಭಟ್ ಎಂಬ ಆರ್‌ಎಸ್‌ಎಸ್ ಸ್ವಯಂಸೇವಕರು ಈ ಬಾರಿಯ ಜಂಬೂಸವಾರಿಗೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡುತ್ತಿರುವುದು ಹಾಗೂ ಜಂಬೂ ಸವಾರಿಯು ಜನಸಮೂಹದ ನಡುವೆ ಸಾಗುತ್ತಿರುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಫೋಟೋಗಳನ್ನು ನೋಡಿ ಮೆಚ್ಚಿಕೊಂಡಿರುವ ಪ್ರಧಾನಿ ಮೋದಿ, ಜಂಬೂ ಸವಾರಿಯನ್ನು ಮನಸಾರೆ ಪ್ರಶಂಶಿಸಿದ್ದಾರೆ.


Spread the love