ಮೈಸೂರು ದಸರಾ ಲೆಕ್ಕ ಕೊಟ್ಟ ಸಚಿವ ಎಸ್.ಟಿ.ಸೋಮಶೇಖರ್

Spread the love

ಮೈಸೂರು ದಸರಾ ಲೆಕ್ಕ ಕೊಟ್ಟ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: 2022ರ ನಾಡಹಬ್ಬ ದಸರಾ ಉತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ಅದಕ್ಕಾಗಿ 28.74 ಕೋಟಿ ರೂ. ಹಣ ವೆಚ್ಚವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಶ್ವವಿಖ್ಯಾತ ದಸರಾ ಮಹೋತ್ಸವ ಹಾಗೂ ಜಂಬೂ ಸವಾರಿ ಮೆರವಣಿಗೆಗೆ ಆದ ವೆಚ್ಚದ ಬಗ್ಗೆ ಮಾಹಿತಿ ನೀಡಿ, ದಸರಾ ಉತ್ಸವಕ್ಕಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 15 ಕೋಟಿ ರೂ., ಅರಮನೆ ಆಡಳಿತ ಮಂಡಳಿಯಿಂದ 5 ಕೋಟಿ ರೂ., ಪ್ರಯೋಜಕತ್ವದಿಂದ 32.50 ಲಕ್ಷ, ಟಿಕೆಟ್ ಮತ್ತು ಗೋಲ್ಡನ್ ಕಾರ್ಡ್ ಮಾರಾಟದಿಂದ 76.38 ಲಕ್ಷ ರೂ. ಸೇರಿದಂತೆ ಒಟ್ಟು 31 ಕೋಟಿ, 8 ಲಕ್ಷದ 88 ಸಾವಿರದ 819 ರೂ. ಸಂಗ್ರಹವಾಗಿತ್ತು. ಇದರಲ್ಲಿ ದಸರಾ ಉಪಸಮಿತಿಗಳಿಗೆ 26,54,49,058 ರೂ. ಹಾಗೂ ಮಂಡ್ಯ ಚಾಮರಾಜನಗರ ಹಾಸನ ಜಿಲ್ಲೆಯ ದಸರಾ ಉತ್ಸವಕ್ಕೆ 2.20 ಕೋಟಿ ರೂ. ವೆಚ್ಚವಾಗಿದೆ. ಜತೆಗೆ ರಾಜವಂಶಸ್ಥರಿಗೆ 47.20 ಲಕ್ಷ ರೂ. ಗೌರವ ಧನ ನೀಡಲಾಗಿದೆ. 1.26 ಕೋಟಿ ರೂ. ಉಳಿಕೆಯಾಗಿದ್ದು, ಖರ್ಚು ವೆಚ್ಚದ ಬಗ್ಗೆ 21 ದಸರಾ ಉಪಸಮಿತಿಗಳು ಸೇರಿದಂತೆ ವೆಚ್ಚದ ಲೆಕ್ಕಾಚಾರವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ದಿನಗಳಲ್ಲಿ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು.

ದಸರಾ ಉತ್ಸವ ಅಂಗವಾಗಿ ರಚನೆಯಾಗಿದ್ದ 17 ಉಪ ಸಮಿತಿ ಸೇರಿದಂತೆ ಅರಣ್ಯ ಇಲಾಖೆ, ರಂಗಾಯಣ ಹಾಗೂ ವಿವಿಧ ಕಾಮಗಾರಿಗೆ 26,54,49,058 ರೂ. ವೆಚ್ಚವಾಗಿದೆ. ಇದರಲ್ಲಿ ಸ್ವಾಗತ ಮತ್ತು ಆಮಂತ್ರಣ ಉಪಸಮಿತಿಗೆ 78.57 ಲಕ್ಷ ರೂ., ಗಣ್ಯರಿಗೆ ಮತ್ತು ಕಲಾವಿದರಿಗೆ ಸ್ಥಳಾವಕಾಶ ಮತ್ತು ಸಾರಿಗೆ ವ್ಯವಸ್ಥೆ 3.77 ಕೋಟಿ ರೂ., ಮೆರವಣಿಗೆ ಉಪಸಮಿತಿಗೆ 2.22 ಕೋಟಿ ರೂ., ಪಂಜಿನ ಕವಾಯತು ಉಪಸಮಿತಿಗೆ 1.17 ಕೋಟಿ ರೂ., ಸ್ತಬ್ಧಚಿತ್ರ ಉಪಸಮಿತಿಗೆ 29.88 ಲಕ್ಷ ರೂ., ರೈತ ದಸರಾ (ಗ್ರಾಮೀಣ ದಸರಾ)ಕ್ಕೆ 51.66 ಲಕ್ಷ ರೂ. ರೂ., ಕ್ರೀಡಾ ಉಪಸಮಿತಿಗೆ 22.02 ಲಕ್ಷ ರೂ., ಸಾಂಸ್ಕೃತಿಕ ಉಪಸಮಿತಿಗೆ 1.61 ಕೋಟಿ ರೂ., ಲಲಿತಕಲೆ ಮತ್ತು ಕರಕುಶಲ ಉಪಸಮಿತಿಗೆ 17.90 ಲಕ್ಷ ರೂ., ಕವಿಗೋಷ್ಠಿ ಉಪಸಮಿತಿಗೆ 41.69 ಲಕ್ಷ ರೂ., ಯೋಗ ದಸರಾ ಉಪಸಮಿತಿಗೆ 18.94 ಲಕ್ಷ ರೂ., ಯುವ ಸಂಭÀ್ರಮ ಮತ್ತು ಯುವ ದಸರಾ ಉಪಸಮಿತಿಗೆ 6.36 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಗೆ 31.07 ಲಕ್ಷ ರೂ., ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಗೆ 29.08 ಲಕ್ಷ ರೂ., ಚಲನಚಿತ್ರ ಉಪಸಮಿತಿಗೆ 25.50 ಲಕ್ಷ ರೂ., ಕುಸ್ತಿ ಉಪಸಮಿತಿಗೆ 34.47 ಲಕ್ಷ ರೂ., ಪ್ರಚಾರ ಉಪಸಮಿತಿಗೆ 7.40 ಲಕ್ಷ ರೂ., ದಸರಾ ದರ್ಶನ ಉಪಸಮಿತಿಗೆ 18.50 ಲಕ್ಷ ರೂ., ಅರಣ್ಯ ಇಲಾಖೆಗೆ 1.46 ಲಕ್ಷ ರೂ., ರಂಗಾಯಣಕ್ಕೆ 10 ಲಕ್ಷ ರೂ., ಸಿವಿಲ್ ಮತ್ತು ವಿದ್ಯುತ್ ಕಾಮಗಾರಿಗಳಿಗೆ ಮುಡಾ, ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ 5.76 ಕೋಟಿ ರೂ. ವೆಚ್ಚವಾಗಿದ್ದು, ಒಟ್ಟು 26.54 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧÀ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಎಸ್‌ಪಿ ಆರ್.ಚೇತನ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಅನೇಕರು ಇದ್ದರು.


Spread the love

Leave a Reply

Please enter your comment!
Please enter your name here