
ಮೈಸೂರು ಪಾಲಿಕೆಯಲ್ಲಿ ಅರಳಿದ ಕಮಲ – ಮೊದಲ ಬಾರಿಗೆ ಬಿಜೆಪಿ ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆ
ಮೈಸೂರು: ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದು ಮೇಯರ್ ಪಟ್ಟಕ್ಕೇರಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ ಪರ 26 ಮತಗಳು ಲಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರ 22 ಮತ ಚಲಾವಣೆಯಾಗಿದೆ.
ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸುನಂದಾ ಪಾಲನೇತ್ರ 23ನೇ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕಮಲವನ್ನು ಅರಳಿಸಿದ್ದಾರೆ
ಆಸ್ತಿ ವಿವರ ನೀಡುವಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ ಆರೋಪದಲ್ಲಿ ಮೇಯರ್ ಆಗಿದ್ದ ಜೆಡಿಎಸ್ ಕಾಂಗ್ರೆಸ್ ಮೈತ್ರಿಯ ಜೆಡಿಎಸ್ ರುಕ್ಷುಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನಲೆಯಲ್ಲಿ ತೆರವಾಗಿದ್ದ ಮೇಯರ್ ಸ್ನಾನಕ್ಕೆ ಬುಧವಾರ ಚುನಾವಣೆ ನಡೆಯಿತು.
ಬುಧವಾರ ಬೆಳಗ್ಗೆ ನಡೆದ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಿಂದ 55ನೇ ವಾರ್ಡ್ ಸದಸ್ಯ ಶಾಂತಕುಮಾರಿ, ಜೆಡಿಎಸ್ ನಿಂದ ಅಶ್ವಿನಿ ಅನಂತು ಮತ್ತು ಬಿಜೆಪಿಯಿಂದ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಸಿದರು.
ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಜಿ.ಡಿ.ಪುಕಾಶ್ ಕೈ ಎತ್ತುವ ಮೂಲಕ ಚುನಾವಣ ಪ್ರಕ್ರಿಯೆ ಆರಂಭಿಸಿದರು. ಮೊದಲಿಗೆ ಕಾಂಗ್ರೆಸ್ ಪಕ್ಷದ ಶಾಂತಕುಮಾರಿ ಪರ 22 ಮತಗಳು ಲಭಿಸಿದವು. ನಂತರ ಬಿಜೆಪಿಯ ಸುನಂದಾ ಪಾಲನೇತ್ರ ವರ 26 ಮತಗಳು ಬಂದವು. ಕೊನೆಯದಾಗಿ ಜೆಡಿಎಸ್ ನ ಅಶ್ವಿನಿ ಅನಂತು ಪರವೂ 22 ಮತಗಳು ಲಭಿಸಿದವು. ಅಂತಿಮವಾಗಿ ಚುನಾವಣಾಧಿಕಾರಿಗಳು ಬಿಜೆಪಿಯ ಸುನಂದಾ ಪಾಲನೇತ್ರ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಬಿಜೆಪಿ ನಿರಾಯಸವಾಗಿ ಮೇಯರ್ ಪಟ್ಟಕ್ಕೇರಿತು.
ಮೈಸೂರು ಮನಪಾದಲ್ಲಿ ಒಟ್ಟು ಸದಸ್ಯರ ಸಂಖ್ಯೆ 65 ಆಗಿದ್ದು, ಒಬ್ಬರ ಸದಸ್ಯತ್ವ ರಾಗಿರುವುದರಿಂದ ಸದ್ಯ 64 ಸದಸ್ಯರಿದ್ದಾರೆ. ಬಿಜೆಪಿಯ 22 ಸದಸ್ಯರು, ಒಬ್ಬ ಸಂಸದ, ಇಬ್ಬರು ಶಾಸಕರು ಸೇರಿ 25, ಕಾಂಗ್ರೆಸ್ ನಲ್ಲಿ 20 ಸದಸ್ಯ ಬಲವಿದ್ದರೆ, ಜೆಡಿಎಸ್ ನಲ್ಲಿ 21 ಸದಸ್ಯರ ಬಲವಿದೆ.
ನೂತನ ಮೇಯರ್ ಅವರ ಅಧಿಕಾರಾವಧಿ ಇನ್ನು ಆರು ತಿಂಗಳು ಮಾತ್ರವಾಗಿರುತ್ತದೆ.