ಮೈಸೂರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು

Spread the love

ಮೈಸೂರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು

ಮೈಸೂರು: ಜಂಬೂಸವಾರಿ ಮುಗಿದರೂ ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ಎಲ್ಲಿ ನೋಡಿದರೂ ಜನಜಂಗುಳಿ ಕಾಣಿಸುತ್ತಿತ್ತು. ಇದೀಗ ದಸರೆ ಕಳೆದರೂ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ.

ಈ ಬಾರಿ ಪ್ರವಾಸಿಗರು ಮೃಗಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟಿಕೆಟ್ ಕೌಂಟರ್ ಬಳಿ ನೂಕುನುಗ್ಗಲು ಉಂಟಾಗಿತ್ತು. ಚಾಮುಂಡಿ ಬೆಟ್ಟ ಪ್ರವಾಸಿಗರಿಂದ ತುಂಬಿತ್ತು. ಸಾಲು ಸಾಲು ವಾಹನಗಳಿಂದ ಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಗಿತ್ತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸಪಡುವಂತಾಗಿತ್ತು.

ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ವೀಕ್ಷಿಸಿದ ಜನರು ದಸರಾ ವಸ್ತು ಪ್ರದರ್ಶನ  ಲಗ್ಗೆ ಇಟ್ಟಿದ್ದರು. ಈಗಲೂ ಸಂಜೆ ಐದು ಗಂಟೆಯ ನಂತರ ವಸ್ತುಪ್ರದರ್ಶನ ಆವರಣ ಜನರಿಂದ ತುಂಬಿ ತುಳುಕುತ್ತಿದೆ. ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಜನರು ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿ ಕಾರಂಜಿ ವೀಕ್ಷಿಸುತ್ತಿದ್ದಾರೆ.

ಚಾಮುಂಡಿಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕಾಣಿಸುತ್ತಿದ್ದು, ಮತ್ತೆ ವೀಕೆಂಡ್  ಬರುತ್ತಿರುವುದರಿಂದ ಪ್ರವಾಸಿಗರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.


Spread the love