ಮೊಂತಿ ಫೆಸ್ತ್: ಐಸಿವೈಎಮ್ ಸಾಸ್ತಾನ ಘಟಕದಿಂದ ಹೂ ಜೋಡಣೆ ಸ್ಪರ್ಧೆ ಆಯೋಜನೆ

Spread the love

ಮೊಂತಿ ಫೆಸ್ತ್: ಐಸಿವೈಎಮ್ ಸಾಸ್ತಾನ ಘಟಕದಿಂದ ಹೂ ಜೋಡಣೆ ಸ್ಪರ್ಧೆ ಆಯೋಜನೆ

ಉಡುಪಿ: ಮೊಂತಿ ಫೆಸ್ತ್ ಆಚರಣೆಯ ಪ್ರಯುಕ್ತ ಭಾರತೀಯ ಕಥೊಲಿಕ ಯುವ ಸಂಚಾಲನ ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕ ವತಿಯಿಂದ ಹೂ ಜೋಡಣೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಚರ್ಚಿನ 10 ವಾಳೆಗಳಾದ ಸಂತ ಅಂತೋನಿ, ಸಂತ ಜೋಸೆಫ್, ಸೈಂಟ್ ಮ್ಯಾಥ್ಯು, ಮಿಲಾಗ್ರಿಸ್, ರೋಜರಿ, ವೆಲಂಕಣಿ, ನಿತ್ಯಾಧರ್, ಸಂತ ಪೀಟರ್, ಕ್ರೈಸ್ಟ್ ದ ಕಿಂಗ್ ಮತ್ತು ಸೇಕ್ರೆಡ್ ಹಾರ್ಟ್ ವಾಳೆಗಳ ಸದಸ್ಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು. ಎಲ್ಲಾ ತಂಡಗಳ ಸದಸ್ಯರು ಆಕರ್ಷಕ ರೀತಿಯಲ್ಲಿ ಹೂಗಳನ್ನು ಜೋಡಿಸಿ ಗಮನ ಸೆಳೆದರು.

ಸ್ಪರ್ಧೆಗೆ ತೀರ್ಪುಗಾರರಾಗಿ ಡಯಾನಾ ಡಿ’ಸೋಜಾ, ಡೊಲ್ಸಿ ಮಸ್ಕರೇನ್ಹಸ್ ಸಹಕರಿಸಿದರು.

ಈ ವೇಳೆ ಚರ್ಚಿನ ಧರ್ಮಗುರು ವಂ|ಸುನೀಲ್ ಡಿಸಿಲ್ವಾ, ಐಸಿವೈಎಮ್ ಸಂಘಟನೆಯ ಪ್ರಿಯಾ ಡಿಸೋಜಾ, ಕಾರ್ಯದರ್ಶಿ ಕೊನ್ಸಿಟಾ ಬಾಂಜ್, ಕೋಶಾಧಿಕಾರಿ ಸೈಮನ್ ಡಿಸೋಜಾ, ಸಲಹೆಗಾರರಾದ ಲೂಯಿಸ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here