ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

Spread the love

ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

ಮುಂಬಯಿ : ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ, ಉದ್ಯಮಿ ಧರ್ಮಪಾಲ್ ಪಿ (೭೪) ಇವರು ಡಿ. ೨೭ ರಂದು ಮುಂಜಾನೆ ಹೃದಯಘಾತದಿಂದಾಗಿ ಪಡುಬಿದ್ರೆಯ ಕಡಿಪಟ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲ್ಲಿದ್ದಾರೆ.

ಮೂಲತಃ ಪಡುಬಿದ್ರೆ ಕಾಡಿಪಟ್ನದವರಾದ ಇವರು ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರ , ಮೊಗವೀರ ಯುವಕ ಸಂಘ ಮುಂಬಯಿ ಇದರ ಉಪಾಧ್ಯಕ್ಷರಾಗಿದ್ದರು. ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ಇವರ ನಿಕಟವರ್ತಿಯಾಗಿದ್ದ ಧರ್ಮಪಾಲ್ ಪಿ ಇವರ ನಿಧನಕ್ಕೆ ಉಡುಪಿಯ ಮೊಗವೀರ ಸಮಾಜದ ಮುಂದಾಳು ಡಾ. ಜಿ. ಶಂಕರ್ ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ ಎಲ್ ಬಂಗೇರ ಮೊಗವೀರ ಯುವಕ ಸಂಘದ ಪದಾಧಿಕಾರಿಗಳು ಮೊಗವೀರ ಮಹಾಜನ ಸೇವಾ ಸಂಘ ಹೋಬಳಿ ಅಧ್ಯಕ್ಷ ರಮೇಶ್ ಕುಂದರ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್ ಸುರೇಶ್ ಕಾಂಚನ್, ಮಹಾಬಲ ಕುಂದರ್, ಕಾಡಿಪಟ್ಣ ಮೊಗವೀರ ಸಭಾ ಪದಾಧಿಕಾರಿಗಳು. ಶ್ರೀಮಧ್ ಭಾರತ ಮಂಡಳಿ ಅಧ್ಯಕ್ಷ ಜಗನ್ನಾಥ ಪುತ್ರ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ ಮೊದಲಾದವರು ಸಂತಾಪ ಸೂಚಿಸಿದ್ದಾರೆ.


Spread the love