ಮೊಗವೀರ ಯುವ ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣರಿಗೆ ಕಾಪು ವಿಧಾನಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಿಂದ ಅಭಿನಂದನೆ

Spread the love

ಮೊಗವೀರ ಯುವ ಸಂಘಟನೆಯ ನೂತನ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣರಿಗೆ ಕಾಪು ವಿಧಾನಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಿಂದ ಅಭಿನಂದನೆ

ಉಡುಪಿ : ರಾಜ್ಯದ ಅತ್ಯಂತ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ ನೂತನ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ “ರಾಜೇಂದ್ರ ಸುವರ್ಣ ಹಿರಿಯಡ್ಕ” ಇವರನ್ನು ಕಾಪು ವಿಧಾನಸಭಾ ಇದರ ಯುವ ಕಾಂಗ್ರೇಸ್ ಅಧ್ಯಕ್ಷರಾದ ನವೀನ್ ಸಾಲಿಯಾನ್ ರವರು ಭೇಟಿಯಾಗಿ ಸನ್ಮಾನಿಸಿ ಶುಭ ಹಾರೈಸಿದರು.

ನಾಡೋಜ ಡಾ. ಜಿ ಶಂಕರ್ ರವರ ಮುಂದಾಳತ್ವದಲ್ಲಿ ಮೊಗವೀರ ಸಂಘಟನೆಯು ಹಲವಾರು ಸಾಮಾಜಿಕ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡ ಪ್ರತಿಷ್ಠಿತ ಸಂಘಟನೆಯಗಿದೆ. ರಾಜೇಂದ್ರ ಸುವರ್ಣರ ಅಧಿಕಾರವದಿಯಲ್ಲಿ ಮೊಗವೀರ ಯುವ ಸಂಘಟನೆ ಇನ್ನು ಬಲಿಷ್ಠವಾಗಲಿ ಎಂದು ಹರಸಿ ಹಾರೈಸಿದರು.

ಈ ಸಂಧರ್ಭದಲ್ಲಿ ಮಿಥುನ್ ರಾಜ್, ಸತ್ಯ, ಧನರಾಜ್ ಸುವರ್ಣ ಹಾಗೂ ಪ್ರಜ್ವಲ್ ಕುಂದರ್ ಜೊತೆಗಿದ್ದರು.


Spread the love