ಮೊಟ್ಟೆ ಹಗರಣ: ಸಚಿವೆ ಜೊಲ್ಲೆ ಮಹಿಳಾ ಸಂಕುಲಕ್ಕೆ ಕಳಂಕ – ವಿಲ್ಮಾ ಜೇನಿಷಾ ಆಕ್ರೋಶ

Spread the love

ಮೊಟ್ಟೆ ಹಗರಣ: ಸಚಿವೆ ಜೊಲ್ಲೆ ಮಹಿಳಾ ಸಂಕುಲಕ್ಕೆ ಕಳಂಕ – ವಿಲ್ಮಾ ಜೇನಿಷಾ ಆಕ್ರೋಶ

ಉಡುಪಿ: ಮಹಿಳೆಯರ ಕಲ್ಯಾಣಕ್ಕಾಗಿ ನಿಲ್ಲಬೇಕಾದ ಇಲಾಖೆಯ ಸಚಿವೆ ಗರ್ಭಿಣಿ ಮಹಿಳೆಯರಿಗೇ ನೀಡುವ ಮೊಟ್ಟೆಯಲ್ಲಿಯೂ ಅವ್ಯವಹಾರಕ್ಕೆ ಮುಂದಾಗಿದ್ದು ಮಹಿಳಾ ಸಂಕುಲಕ್ಕೆ ಕಳಂಕ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ವಿಲ್ಮಾ ಜೇನಿಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಅನೇಕರು ಕೊರೋನದಿಂದ ಒಂದುಹೋತ್ತಿನ ಊಟಕ್ಕೂ ಕಂಗಾಲಾಗಿರುವಾಗ ಬಿಜೆಪಿ ಸರಕಾರದ ಸಚಿವರು,ಶಾಸಕರು ಲೂಟಿಮಾಡುವ ನಾಚಿಕೆಗೇಡು ಕಾಯಕದಲ್ಲಿ ತೊಡಗಿರುವುದು ಅಸಯ್ಯ ಹುಟ್ಟಿಸುತ್ತಿದೆ. ಒಬ್ಬ ಮಹಿಳೆ ಯಾಗಿ ಗರ್ಭಿಣಿ ಮಹಿಳೆಗೆ ದೊರಕುವ ಊಟವನ್ನು ಕಸಿಯೂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ

“ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರವನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಆದರೆ ಶಶಿಕಲಾ ಜೊಲ್ಲೆಯವರ ವಿಷಯದಲ್ಲಿ ಮಹಿಳೆಯರು ತಲೆ ತಗ್ಗಿಸುವತಾಗಿದೆ. ಇವರಿಗೆ ಸಚಿವೆಯಾಗಿ ಮಾತ್ರವಲ್ಲ ಶಾಸಕಿಯಾಗಿ ಮುಂದುವರಿಯುವ ಯಾವ ಅರ್ಹತೆಯೂ ಇಲ್ಲ. ಮೊಟ್ಟೆ ಖರೀದಿ ವ್ಯವಹಾರ ಕೊಟ್ಯಂತರ ರೂಪಾಯಿ ಲಂಚ ಬೇಡಿಕೆ ಇಟ್ಟಿರುವ ಸಚಿವೆ ಶಶಿಕಲಾ ಜೊಲ್ಲೆರವರು ಕೊಡಲೇ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love