ಮೊಬೈಲ್ ಕಳೆದರೆ ಬ್ಲಾಕ್ ಮಾಡುವುದು ಅತಿ ಮುಖ್ಯ! ಏಕೆ ಗೊತ್ತೇ? ಇಲ್ಲಿದೆ ಪೊಲೀಸ್ ಮಾಹಿತಿ ವಿವರ

Spread the love

ಮೊಬೈಲ್ ಕಳೆದರೆ ಬ್ಲಾಕ್ ಮಾಡುವುದು ಅತಿ ಮುಖ್ಯ! ಏಕೆ ಗೊತ್ತೇ? ಇಲ್ಲಿದೆ ಪೊಲೀಸ್ ಮಾಹಿತಿ ವಿವರ

ಉಡುಪಿ: ಮೊಬೈಲ್ ಕಳೆದರೆ ಬ್ಲಾಕ್ ಮಾಡುವುದು ಅತಿ ಮುಖ್ಯ! ಹೌದು ಇದು ನಿಮ್ಮ ಮಾಹಿತಿಗಳ ಸುರಕ್ಷತೆಗೆ ಅಷ್ಟೇ ಅಲ್ಲದೆ ಇತರ ಸೈಬರ್ ಕ್ರೈಂಗಳನ್ನೂ ತಡೆಯಬಹುದಾಗಿದೆ. ಹಾಗಿದ್ರೆ ಕಳೆದುಹೋದ ಮೊಬೈಲ್ ನ ಬ್ಲಾಕ್ ಮಾಡೋದು ಹೇಗೆ, ಪೊಲೀಸರು ಹೇಳುವುದೇನು? ಇಲ್ಲಿದೆ ವಿವರ.

ಇತ್ತೀಚಿನ ದಿನಗಳಲ್ಲಿ ಕಳುವಾದ, ಕಾಣೆಯಾದ, ಸುಲಿಗೆಯಾದ ಮೊಬೈಲ್ ಫೋನ್ಗಳು ಸೈಬರ್ ಅಪರಾಧ ನಾರ್ಕೋಟಿಕ್ಸ್ ಅಪರಾಧ ಸೇರಿದಂತೆ ಇತರೆ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬಂದಿರುತ್ತದೆ. ಇಂತಹ ಮೊಬೈಲ್ ಫೋನ್ಗಳ ದುರ್ಬಳಕೆಯನ್ನು ತಡೆಗಟ್ಟಲು ಕೇಂದ್ರ ಟೆಲಿಕಮ್ಯುನಿಕೇಶನ್ ಇಲಾಖೆಯಿಂದ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಹಾಗೂ ಪೊಲೀಸ್ ಇಲಾಖೆಯಿಂದ ಕೂಡಾ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ.

ಈ ಕೆಳಕಂಡ ವಿಧಾನಗಳನ್ನು ಅನುಸರಿಸುವುದರ ಮೂಲಕ ಕಳುವಾದ ಮೊಬೈಲ್ ಫೋನ್ಗಳನ್ನು ಬ್ಲಾಕ್ ಮಾಡಬಹುದಾಗಿದೆ.

  1. ತಕ್ಷಣವೇ KSP E-Lost (ಕೆಎಸ್ಪಿ ಇ-ಲಾಸ್ಟ್) ಅಪ್ಲಿಕೇಶನ್ ನಲ್ಲಿ ದೂರನ್ನು ಸಲ್ಲಿಸಿ (ಡಿಜಿಟಲ್ ಇ ಅಕ್ನಾಲಜ್ಮೆಂಟ್) Digital E Acknowledgement ಪಡೆದುಕೊಳ್ಳಬೇಕು. ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳುವುದು. ಸ್ವೀಕೃತಿಯ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು.
  2. ನೀವು ಕಳೆದುಕೊಂಡಿರುವ ಸಿಮ್ ಕಾರ್ಡ್ ಅನ್ನು ಸಂಬಂಧಪಟ್ಟ ಸರ್ವಿಸ್ ಪ್ರೊವೈಡರ್ ನಿಂದ ಮತ್ತೆ ಪಡೆದುಕೊಂಡು ಒ.ಟಿ.ಪಿ ಪಡೆಯಲು ಸದರಿ ಸಿಮ್ ಕಾರ್ಡನ್ನು ಚಾಲನೆಯಲ್ಲಿ ಇಟ್ಟು ಕೊಳ್ಳುವುದು CEIR PORTAL (ಸಿಇಐಆರ್ ಪೋರ್ಟಲ್) ನಲ್ಲಿ ಒ.ಟಿ.ಪಿ ಪಡೆಯಲು ಇದು ಅನುಕೂಲವಾಗುತ್ತದೆ.
  3. ನಂತರ www.ceir.gov.in ವೆಬ್ ಸೈಟ್ಗೆ ಹೋಗಿ ತಮ್ಮ ಕಳುವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ ಗಳ ಮಾಹಿತಿಯನ್ನು ನಮೂದಿಸಬೇಕು. ಸದರಿ ಮಾಹಿತಿ ನಮೂದಿಸಿದ 24 ಗಂಟೆಗಳಲ್ಲಿ ತಮ್ಮ ಮೊಬೈಲ್ ಫೋನ್ ಬ್ಲಾಕ್ ಆಗುತ್ತದೆ. ನಂತರ ಯಾರೂ ಕೂಡಾ ಆ ಮೊಬೈಲ್ ಅನ್ನು ದುರ್ಬಳಕೆ ಮಾಡಲು ಸಾದ್ಯವಿರುವುದಿಲ್ಲ.
  4. ಕಳುವಾದ/ಕಾಣೆಯಾದ/ಸುಲಿಗೆಯಾದ ಮೊಬೈಲ್ ಫೋನ್ ಪತ್ತೆಯಾದರೆ ಈಗಾಗಲೇ ತಿಳಿಸಿರುವ ಸಿಇಐಆರ್ ಪೋರ್ಟಲ್ ( CEIR PORTAL) ನಲ್ಲಿ ಲಾಗಿನ್ ಆಗಿ ಅನ್ ಬ್ಲಾಕ್ ಮಾಡಿ ಉಪಯೋಗಿಸಬಹುದು.
  5.  ಹಾಗೆಯೇ ಸಾರ್ವಜನಿಕರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರೆ CEIR PORTAL ಮೂಲಕ ಕಳುವಾದ/ಕಾಣೆಯಾದ ಫೋನ್ ಅನ್ನು ಬ್ಲಾಕ್ ಮಾಡಲಾಗುವುದು ಹಾಗೂ ಫೋನ್ ಪತ್ತೆಯಾದಲ್ಲಿ ಅನ್ಗ್ ಬ್ಲಾಕ್ ಮಾಡಲಾಗುವುದು.

Spread the love