ಮೋದಿಯವರದ್ದು ಅದಾನಿ, ಅಂಬಾನಿಯ ಏಳಿಗೆಗಾಗಿ ಇರುವ ಸರ್ಕಾರ – ಪಿ.ವಿ.ಮೋಹನ್

Spread the love

ಮೋದಿಯವರದ್ದು ಅದಾನಿ, ಅಂಬಾನಿಯ ಏಳಿಗೆಗಾಗಿ ಇರುವ ಸರ್ಕಾರ – ಪಿ.ವಿ.ಮೋಹನ್

ಮಂಗಳೂರು: ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ ತೈಲ ಬೆಲೆ ಏರಿಕೆ ನೀತಿ ವಿರೋಧಿಸಿ ಮಂಗಳೂರು ದಕ್ಷಿಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಿಂದ ಮ.ನ.ಪಾ ಪಾಲಿಕೆವರೆಗೆ ಸೈಕಲ್ ಜಾಥ, ಪಾದಯಾತ್ರೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಬೆಲೆಯೇರಿಕೆಯಿಂದ ಇಂದು ಜನರ ನಿತ್ಯ ಜೀವನವು ಕಷ್ಟಕರವಾಗಿದೆ. ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ದರ ಏರಿಸಿರುವುದರಿಂದ ಮಧ್ಯಮ-ಬಡ ಕುಟುಂಬದ ಬದುಕು ಕಂಗಾಲಾಗಿದೆ. ಮೋದಿ ಸರ್ಕಾರ ಬಡವರ, ರೈತರ, ಕಾರ್ಮಿಕರ ಪರವಾಗಿರುವ ಸರ್ಕಾರವಲ್ಲ. ಅದಾನಿ, ಅಂಬಾನಿಯ ಏಳಿಗೆಗಾಗಿ ಇರುವ ಸರ್ಕಾರ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಜಾಗತಿಕವಾಗಿ ತೈಲ ಬೆಲೆ 140 ಡಾಲರ್ ಇರುವಾಗ ಪೆಟ್ರೋಲ್ ಬೆಲೆ 62 ರೂ. ಹಾಗೂ ಡೀಸೆಲ್ ದರ 52 ರೂ.ಗೆ ಸಿಗುತ್ತಿದ್ದ ವೇಳೆ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿಜೆಪಿಗರು ಪ್ರತಿಭಟನೆ ನಡೆಸಿದ್ದರು. ಈಗ ಇವರೆಲ್ಲಾ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಅಚ್ಚೇ ದಿನ್ ಕೊಡುತ್ತೇವೆ ಎಂದು ಹೇಳಿ ಅಧಿಕಾರ ಪಡೆದ ನರೇಂದ್ರ ಮೋದಿ ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಮೋಸ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆಯಲ್ಲೂ ಪರಿಣಾಮ ಬೀರುತ್ತದೆ.ಇದರಿಂದ ಜನರು ಕಂಗಾಲಾಗಿದ್ದಾರೆ. ಕೂಡಲೇ ರ‍್ಕಾರ ಏರುತ್ತಿರುವ ಬೆಲೆಯೇರಿಕೆಯನ್ನು ಇಳಿಸಬೇಕು. ಇಲ್ಲದಿದ್ದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮ.ನ.ಪಾ ಮಾಜಿ, ಹಾಲಿ ಸದಸ್ಯರು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಜಿಲ್ಲಾ-ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಬಿ ಸಾಲ್ಯಾನ್ ಸ್ವಾಗತಿಸಿ, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ ವಂದಿಸಿದರು.


Spread the love