ಮೋದಿಯವರ ಆದರ್ಶದಂತೆ ಜನಸೇವೆ ಮಾಡುವ ಸಂಕಲ್ಪ ನನ್ನದು – ಯಶ್ಪಾಲ್ ಸುವರ್ಣ

Spread the love

ಮೋದಿಯವರ ಆದರ್ಶದಂತೆ ಜನಸೇವೆ ಮಾಡುವ ಸಂಕಲ್ಪ ನನ್ನದು – ಯಶ್ಪಾಲ್ ಸುವರ್ಣ

ಉಡುಪಿ ವಿಧಾನಸಭಾ ಕ್ಷೇತ್ರ, ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ವತಿಯಿಂದ ಕಾಲ್ನಡಿಗೆ ಮೂಲಕ ಬೃಹತ್ ಮಹಾಭಿಯಾನ ಮೂಲಕ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಅವರ ಮತಯಾಚನೆ ವಿಜಯ ಸಂಕಲ್ಪ ಯಾತ್ರೆಯು ಶನಿವಾರ ಬಬ್ಬುಸ್ವಾಮಿ ದೇವಸ್ಥಾನದಿಂದ ಮಣಿಪಾಲ ಟೈಗರ್ ಸರ್ಕಲ್ವರೆಗೆ ನಡೆಯಿತು. ಮಣಿಪಾಲದ ವಿವಿಧ ರಿಕ್ಷಾ ನಿಲ್ದಾಣಗಳಿಗೆ ತೆರಳಿ ಮತಯಾಚನೆ ನಡೆಸಿದರು.

ಮುಂಬೈ ಉತ್ತರದ ಸಂಸದ ಗೋಪಾಲ ಶೆಟ್ಟಿ ಅವರು ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಯಶ್ಪಾಲ್ ಸುವರ್ಣ ಅವರನ್ನು ಜನರು ಬಹುಮತದಿಂದ ಗೆಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರಕಾರದಿಂದ ಹಿಂದೆಂದೂ ಕಾಣದ ಅಭಿವೃದ್ಧಿ ಅಗಿದೆ. ಯಶ್ಪಾಲ್ ಸುವರ್ಣ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡುವ ಮೂಲಕ ಇನ್ನಷ್ಟು ಅಭಿವೃದ್ಧಿ ಮಾಡಬೇಕಾಗಿದೆ ಎಂದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ನಗರದಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಹಾಕಿಕೊಂಡು ಕ್ಷೇತ್ರವು ಅಭಿವೃದ್ಧಿ ಮಾಡಸುವ ಕನಸಿತ್ತು. ಅದನ್ನು ನನಸು ಮಾಡಲು ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಅವರನ್ನು ಆರಿಸಬೇಕು ಎಂದರು.

ಅಭ್ಯರ್ಥಿ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಬಿಜೆಪಿ ಪಕ್ಷವು ನನ್ನ ಮೇಲೆ ವಿಶ್ವಾಸ ಇಟ್ಟು ನನ್ನನ್ನು ಉಡುಪಿ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಪಕ್ಷ ತೋರಿದ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಒಬ್ಬ ಜನ ಸೇವಕನಾಗಿ ಪ್ರಧಾನಿ ನರೇಂದ್ರ ಮೋದಿಯವರ ಆದರ್ಶದಂತೆ ಜನಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.

ಬಿಜೆಪಿ ಪ್ರಮುಖರಾದ ರೋಶನ್ ಶೆಟ್ಟಿ ಸುಮಿತ್ರಾ ಆರ್. ನಾಯಕ್, ದಿನಕರ್ ಶೆಟ್ಟಿ ಹೆರ್ಗ, ರಾಘವೇಂದ್ರ ಕಿಣಿ, ಕಲ್ಪನಾ ಸುಧಾಮ, ಸಂತೋಷ್ ಜತ್ತನ್, ಅಕ್ಷಿತ್ ಶೆಟ್ಟಿ ಹೆರ್ಗ, ದಿನೇಶ್ ಅಮೀನ್, ಕಿರಣ್ ಬೈಲೂರು, ಶ್ರೀಶಾ ನಾಯಕ್, ಶಿವಕುಮಾರ್ ಅಂಬಲಪಾಡಿ ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here