ಮೋದಿಯಿಂದ ಸ್ವಾಭಿಮಾನಿ ದೇಶ ನಿರ್ಮಾಣ: ಬಿ.ವೈ.ವಿಜಯೇಂದ್ರ

Spread the love

ಮೋದಿಯಿಂದ ಸ್ವಾಭಿಮಾನಿ ದೇಶ ನಿರ್ಮಾಣ: ಬಿ.ವೈ.ವಿಜಯೇಂದ್ರ

ಮೈಸೂರು: ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ವಿದೇಶಗಳಲ್ಲಿ ಭಾರತೀಯರು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತಾಗಿರುವುದರೊಂದಿಗೆ ಭಾರತ ಸ್ವಾಭಿಮಾನಿ ದೇಶವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಜನ್ಮ ದಿನದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿರುವ ಮೋದಿ ಯುಗ ಉತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನರೇಂದ್ರಮೋದಿ ಅವರು ಪ್ರಧಾನಿ ಅಗುವುದಕ್ಕೂ ಮುನ್ನಾ ವಿದೇಶಕ್ಕೆ ತೆರಳುತ್ತಿದ್ದ ನಾಯಕರಿಗೆ ಗೌರವ ಕೊಡದೆ ಭಿಕ್ಷುಕರಂತೆ ಕಾಣಲಾಗುತ್ತಿತ್ತು. ಆದರೆ, ದೂರದೃಷ್ಟಿತ್ವದ ನಾಯಕತ್ವ ಗುಣ ಹೊಂದಿರುವ ಮೋದಿ ಅವರ ಆಡಳಿತ ವೈಖರಿಯಿಂದ ಪಾಶ್ಚಿಮಾತ್ಯರು ಭಾರತದ ಬಗ್ಗೆ ಹೆಮ್ಮೆ, ಗೌರವ ನೀಡುವಂತಾಗಿದೆ. ಹೀಗಾಗಿ ವಿದೇಶಕ್ಕೆ ತೆರಳುವ ಭಾರತೀಯರು ಸ್ವಾಭಿಮಾನದಿಂದ ತಲೆ ಎತ್ತುವ ವಾತಾವರಣ ನಿರ್ಮಾಣಗೊಂಡಿದೆ ಎಂದರು.

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ದೇಶ ಸರ್ವಾಂಗೀಣ ಅಭಿವೃದ್ಧಿ ಆಗುತ್ತಿದೆ. ಕೊರೊನಾ ಸಮಯದಲ್ಲಿ ಜಗತ್ತಿನ ಬಲಾಡ್ಯ ರಾಷ್ಟ್ರಗಳು ತತ್ತರಿಸಿ ಹೋದವು. ಅಂತಹ ಸಮಯದಲ್ಲೂ ದೇಶದ ಜನರಿಗೆ ಆತ್ಮಸ್ಥೈರ್ಯ ತುಂಬಿದ ಮೋದಿ, ತ್ವರಿತವಾಗಿ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು. ಅಲ್ಲದೇ ದೇಶದ ಎಲ್ಲರಿಗೂ ಉಚಿತವಾಗಿ ಲಸಿಕೆ ದೊರೆಯುವಂತೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಬ್ಬ ನಾಯಕನಾದವರಿನಿಗೆ ದೇಶದ ಒಳಗೆ ಮಾತ್ರವಲ್ಲ ನೆರೆ, ಹೊರೆಯಲ್ಲಿ ಏನು ನಡೆಯುತ್ತಿದೆ, ನಮಗೆ ಸೇರಿದ ನೆಲದಲ್ಲಿ ಏನು ರಕ್ಷಣಾ ವ್ಯವಸ್ಥೆ ಮಾಡಬೇಕು ಎನ್ನುವುದಕ್ಕೆ ದೇಶದ ಸುತ್ತ ಇರುವ ದ್ವೀಪಗಳ ಬಗ್ಗೆಯೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದೇ ಸಾಕ್ಷಿ. ಬೇರೆ ರಾಜಕೀಯ ಪPಗಳು ಕೇವಲ ರಾಜಕಾರಣಕ್ಕೆ ಸೀಮಿತವಾಗಿವೆ. ಆದರೆ, ಬಿಜೆಪಿ ಚುನಾವಣಾ ರಾಜಕಾರಣದ ಹೊರತಾಗಿಯೂ ಜನಪರ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಮೋದಿ ಅವರ ಜನ್ಮ ದಿನಾಚರಣೆಯಲ್ಲಿ ಕೇಕ್, ಕಟೌಟ್‌ಗೆ ಹಾಲು ಹಾಕಿ ಸಂಭ್ರಮ ಆಚರಿಸದೆ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಜನರ ಮನೆಗೆ ಮುಟ್ಟಿಸುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.


Spread the love

Leave a Reply

Please enter your comment!
Please enter your name here