ಮೋದಿ ಜನಪರ ಆಡಳಿತ ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Spread the love

ಮೋದಿ ಜನಪರ ಆಡಳಿತ ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ – ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಪ್ರಧಾನಿ ನರೆಂದ್ರ ಮೋದಿ ಆಡಳಿತದ ಕೇಂದ್ರ ಬಿಜೆಪಿ ಸರ್ಕಾರದ ಜನಪರ ಆಡಳಿತವನ್ನು ಸಹಿಸಲಾಗದ ವಿಪಕ್ಷಗಳು ಇಲ್ಲಸಲ್ಲದ ಆರೋಪ ಹೊರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ರಾಜಕೀಯ ಪಕ್ಷವಾಗಿ ಸಮರ್ಥ ಆಡಳಿತ ವ್ಯವಸ್ಥೆಯೊಂದಿಗೆ ಸಾಮಾನ್ಯ ಜನರಿಗೆ ಆಡಳಿತದ ಒಟ್ಟು ಮಾಹಿತಿಯನ್ನು ಕೊಡುವಂತಹ ಈ ವಿಕಾಸ ತೀರ್ಥ ಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಯಲಿ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ನುಡಿದರು.

ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂಟು ವರ್ಷದ ಆಡಳಿತ ಪೂರೈಸಿದ ಹಿನ್ನೆಲೆ ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲ ಭಾನುವಾರ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಆಯೋಜಿಸಿದ ವಿಕಾಸ ತೀರ್ಥ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ನರೆಂದ್ರ ಮೋದಿ ಆಡಳಿತದ ಎಂಟು ವರ್ಷಗಳಲ್ಲಿ ಆದ ಅಭಿವೃದ್ದಿ ಹಾಗೂ ದೇಶ ರಕ್ಷಣೆಯಲ್ಲಿ ತೋರಿದ ಉತ್ಸಾಹ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಂದಿರುವ ಅನೇಕ ಸುಧಾರಣೆಗಳೂ ಸೇರಿದಂತೆ ಒಟ್ಟಾರೆಯ ಅಭಿವೃದ್ದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವೇಗದ ಆಡಳಿತ ಅತ್ಯಂತ ಖುಷಿ ನೀಡಿದೆ ಎಂದರು.

ಇಡೀ ದೇಶದಲ್ಲಿ ಭಾಜಪದ ಕಾರ್ಯಕರ್ತರು ವಿಕಾಸ ತೀರ್ಥ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವಿದಿ ಸಂತಸದ ವಿಚಾರ. ಪ್ರಧಾನಿ‌ ನರೇಂದ್ರ ಮೋದಿಯವರ ಎಂಟು ವರ್ಷದ ಆಡಳಿತ ಜನಪರ ಯೋಜನೆಗಳು, ಒಟ್ಟು ವಿಚಾರಗಳನ್ನು ಜನತೆಗೆ ತಲುಪಿಸುವಲ್ಲಿ ವಿಕಾಸ ಯಾತ್ರೆ ಯಶಸ್ವಿಯಾಗಲಿ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಭಾಜಪದ ಒಟ್ಟು ಆಡಳಿತದ ಪರಿಕಲ್ಪನೆಗಳು ಒಟ್ಟಾಗಿ ಒಂದಾಗಿ ದೇಶವನ್ನು ಮುನ್ನಡೆಸುವಂತಹ ರೀತಿ ನಿಜಕ್ಕೂ ಅದ್ಭುತ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಭಾಜಪ ಜಿಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಮಂಡಲ ಪ್ರಭಾರಿ ಬೈಕಾಡಿ ಸುಪ್ರಸಾದ್ ಶೆಟ್ಟಿ, ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮೊದಲಾದವರು ಇದ್ದರು.


Spread the love