ಮೋದಿ ಜನ್ಮ ದಿನಾಚರಣೆ: ಕೊಲ್ಲೂರಿನಲ್ಲಿ‌ ಚಂಡಿಕಾ ಹೋಮ

Spread the love

ಮೋದಿ ಜನ್ಮ ದಿನಾಚರಣೆ: ಕೊಲ್ಲೂರಿನಲ್ಲಿ‌ ಚಂಡಿಕಾ ಹೋಮ

ಕುಂದಾಪುರ: ಪ್ರಧಾನಿ‌ ನರೇಂದ್ರ ಮೋದಿಯವರ 72 ನೇ‌ ಜನ್ಮ ದಿನಾಚರಣೆಯ‌ ಅಂಗವಾಗಿ ಶನಿವಾರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಮೋ ಅಭಿಮಾನಿಗಳು ಚಂಡಿಕಾ ಹೋಮ ನೆರವೇರಿಸಿದ್ದಾರೆ.

ಪ್ರಧಾನಿ‌ ಮೋದಿಯವರ ಶ್ರೇಯೋಭಿವೃದ್ದಿ, ದೀರ್ಘಾಯುಷ್ಯ ಹಾಗೂ ದೇಶದ ಸುಭಿಕ್ಷೆಗಾಗಿ ನಡೆದ ಈ‌ ಹೋಮದಲ್ಲಿ ಜಿ.ಪಂ‌ ಮಾಜಿ ಸದಸ್ಯ ಬಾಬು ಶೆಟ್ಟಿ ತೆಗ್ಗರ್ಸೆ, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲ್‌ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗೋಪಾಲಕೃಷ್ಣ ನಾಡ, ತಾ.ಪಂ ಮಾಜಿ‌ ಸದಸ್ಯರಾದ ಸದಾಶಿವ ಡಿ ಪಡುವರಿ, ಪುಷ್ಪರಾಜ್ ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಹಾಗೂ ಕಾರ್ಕಳ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನವೀನ್ ನಾಯ್ಕ್ ಇದ್ದರು.


Spread the love

Leave a Reply

Please enter your comment!
Please enter your name here