ಮೋದಿ ತಾಯಿ ಹೀರಾಬೆನ್ ಅಸ್ವಸ್ಥ: ಶೀಘ್ರ ಗುಣಮುಖರಾಗಿ ಎಂದು ರಾಹುಲ್ ಹಾರೈಕೆ

Spread the love

ಮೋದಿ ತಾಯಿ ಹೀರಾಬೆನ್ ಅಸ್ವಸ್ಥ: ಶೀಘ್ರ ಗುಣಮುಖರಾಗಿ ಎಂದು ರಾಹುಲ್ ಹಾರೈಕೆ
 

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

‘ತಾಯಿ ಮತ್ತು ಮಗನ ನಡುವಿನ ಪ್ರೀತಿ ಶಾಶ್ವತ ಮತ್ತು ಅಮೂಲ್ಯವಾದುದು. ಮೋದಿ ಜೀ, ಈ ಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಮತ್ತು ಬೆಂಬಲ ನಿಮ್ಮೊಂದಿಗಿದೆ.

ನಿಮ್ಮ ತಾಯಿ ಹೀರಾಬೆನ್ ಮೋದಿ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬುಧವಾರ ಬೆಳಗ್ಗೆ ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಗುಜರಾತ್‌ನ ಅನೇಕ ಶಾಸಕರು ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


Spread the love