ಮೋದಿ ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ

Spread the love

ಮೋದಿ ವಿರುದ್ಧ ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ

ಮೈಸೂರು: ನೂತನ ಸಂಸತ್ ಭವನ ಉದ್ಘಾಟನೆ ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಪಟ್ಟಾಭಿಷೇಕದಂತಾಗಿದ್ದು, ಅಂಬೇಡ್ಕರ್, ರಾಷ್ಟ್ರಪತಿಗೆ ಅಪಮಾನ ಮಾಡಲಾಗಿದೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಬಗ್ಗೆ ಅಪಾರ ಅಭಿಮಾನ, ನಂಬಿಕೆಯಿಂದ. ಮೇ 28ರಂದು ನಡೆದ ಉದ್ಘಾಟನಾ ಕಾರ್ಯಕ್ರಮದ ಘಟನಾವಳಿಗಳು ಸಂವಿಧಾನದ ಅಣಕದಂತಿದೆ. ಇದು ಪ್ರಧಾನಮಂತ್ರಿ ನೇತೃತ್ವದಲ್ಲಿ ಆಗಿದ್ದು ನೋವು ತಂದಿದೆ. ಅಂದು ಅಂಬೇಡ್ಕರ್ ಅವರಿಗೂ ಗೌರವ ಕೊಡಲಿಲ್ಲ. ರಾಷ್ಟ್ರಪತಿಗೆ ಆಹ್ವಾನವೇ ಇರಲಿಲ್ಲ. ಕಾರ್ಯಕ್ರಮ ಕೇವಲ ಮೋದಿ ಪಟ್ಟಾಭಿಷೇಕದಂತಿತ್ತು. ಇಲ್ಲಿಯವರೆಗೆ ಸಂಸತ್ ಭವನ ಇರಲೇ ಇಲ್ಲವೇನೋ, ಯಾರೂ ದೇಶಕ್ಕೆ ಏನು ಮಾಡಲಿಲ್ಲವೇನೋ, ನಾನಷ್ಟೇ ದೇಶದ ಸಂರಕ್ಷಕ ಎಂದು ಯುವಜನತೆಯಲ್ಲಿ ಭ್ರಮೆ ಬಿತ್ತುವ ಕೆಲಸವನ್ನು ಮೋದಿ ಮಾಡಿದರು. ಇದು ದೇಶದ 140 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.

ಸಂಸತ್‌ನಲ್ಲಿ ಸ್ಥಾಪನೆಯಾಗಬೇಕಿರುವುದು ರಾಷ್ಟçಲಾಂಛನ. ಆದರೆ, ಪ್ರಧಾನಿ ಮೋದಿ ಧರ್ಮ ಲಾಂಛನ ಸ್ಥಾಪನೆ ಮಾಡಿದ್ದಾರೆ. ಇದರಿಂದ ಧರ್ಮನಿರಪೇಕ್ಷತೆಗೆ ಪೆಟ್ಟು ಬಿದ್ದಿದ್ದು, ಸಂವಿಧಾನಕ್ಕೆ ಅಪಚಾರ ಆಗಿದೆ. ಸಂಸತ್ ಭಾರತೀಯರ ಆತ್ಮವಿದ್ದಂತೆ. ಅಲ್ಲಿ ರಾಷ್ಟಿçÃಯ ಲಾಂಛನ, ಅಶೋಕ ಚಕ್ರ ಇರಬೇಕಿತ್ತು. ಆದರೆ, ಧರ್ಮದ ಲಾಂಛನ ಇರಿಸಿದ್ದು ಸರಿಯಲ್ಲ. ಹೋಮ ಹವನ ನಡೆಸುವ ಮೂಲಕ ್ಲ ಪುರೋಹಿತಶಾಹಿ ವ್ಯವಸ್ಥೆ ಮರು ಸ್ಥಾಪನೆ ಆಗಿದೆ. ಧರ್ಮದ ಬಗ್ಗೆ ಗೌರವ ಇದ್ದರೆ ನಿಮ್ಮ ಮನೆಯಲ್ಲಿಟ್ಟುಕೊಳ್ಳಿ. ಸಂಸತ್‌ನಲ್ಲಿ ಅಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಮೋದಿ ಅವರು 9 ವರ್ಷಗಳ ಹಿಂದೆ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದಾಗ ತಲೆ ಬಗ್ಗಿ ನಮಸ್ಕರಿಸಿ, ದೇಶದ ಜನತೆಯ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಈಗ ಮಾಡುತ್ತಿರುವುದೇನು? ನೀವು ಹೇಳಿದ್ದೆಲ್ಲಾ ಸುಳ್ಳಾ? ಜನ ಈ ಬಗ್ಗೆ ಯೋಚಿಸಬೇಕು. ಇದರ ಚರ್ಚೆ ಆಗಬೇಕು ಎಂದರು.

ನೂತನ ಸಂಸತ್ ಭವನದಲ್ಲಿ 1200 ಜನಕ್ಕೆ ಅವಕಾಶ ನೀಡಲಾಗಿದೆ. 2029ಕ್ಕೆ ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ದಕ್ಷಿಣಕ್ಕೆ ಅಧಿಕಾರವಾಗಲಿ, ಅರ್ಥವ್ಯವಸ್ಥೆಯಾಗಲಿ ಸಮಾಧಾನಕರವಾಗಿ ಆಗುವುದಿಲ್ಲ. ಜಿಎಸ್ಟಿ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. 2014ರ ಚುನಾವಣೆಯೇ ಇನ್ನೂ ಆಗಿಲ್ಲ. ಆಗಲೇ 2029ರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ ಭಾರತಕ್ಕೆ ಹೆಚ್ಚು ಅಧಿಕಾರ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆಯಾಗಬೇಕು ಎಂದರು.


Spread the love