ಯಕ್ಷಗಾನ‌ ಕಲಾವಿದನ ಸಂಕಷ್ಟಕ್ಕೆ ಮಿಡಿದ ಶಾಸಕ ಬಿ.ಎಮ್.ಎಸ್

Spread the love

ಯಕ್ಷಗಾನ‌ ಕಲಾವಿದನ ಸಂಕಷ್ಟಕ್ಕೆ ಮಿಡಿದ ಶಾಸಕ ಬಿ.ಎಮ್.ಎಸ್

ಕುಂದಾಪುರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಕ್ಷಗಾನ ಕಲಾವಿದ ಕುಂದಾಪುರ ತಾಲೂಕಿನ ಬಗ್ವಾಡಿ ಗ್ರಾಮದ ನಿವಾಸಿ ಸುಬ್ರಹ್ಮಣ್ಯ ಮೊಗವೀರ ಮನೆಗೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.‌

ಕಿರು ಮೊತ್ತದ ಆರ್ಥಿಕ ಸಹಾಯಧನ ನೀಡಿ ಧೈರ್ಯ ತುಂಬಿದ ಶಾಸಕ ಸುಕುಮಾರ್ ಶೆಟ್ಟಿ, ಮೀನುಗಾರಿಕೆ ಇಲಾಖೆಯಿಂದ ಶೀಘ್ರವಾಗಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದರು. ಮನೆ ನಿರ್ಮಿಸಲು ಬೇಕಾಗುವ ಹೆಂಚುಗಳನ್ನು ಸ್ವತ: ಉಚಿತವಾಗಿ ನೀಡುವ ಭರವಸೆ ನೀಡಿದ ಶಾಸಕರು, ನಾನೇ ಮುತುವರ್ಜಿಯಿಂದ ಮುಂದೆ ನಿಂತು ಮನೆ ಕಟ್ಟಲು ಅಗತ್ಯವಾದ ಎಲ್ಲಾ ಸಲಕರಣಗಳನ್ನು ಸ್ಥಳೀಯ ಮುಖಂಡರ ಮೂಲಕವಾಗಿ ಉಚಿತವಾಗಿ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.


ಬಡ ಕುಟುಂಬಕ್ಕೆ ಶಾಸಕರ ಮಾನವೀಯ ಸ್ಪಂದನೆಗೆ ಸುಬ್ರಹ್ಮಣ್ಯ ಮೊಗವೀರ ಕೃತಜ್ಞತೆ ಸಲ್ಲಿಸಿದ್ದಾರೆ. ಕಟ್‍ಬೇಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಪುತ್ರನ್, ವಂಡ್ಸೆ ಗ್ರಾಪಂ ಸದಸ್ಯ ಪ್ರಶಾಂತ ಪೂಜಾತಿ, ಹಕ್ಲಾಡಿ ಗ್ರಾಪಂ ಸದಸ್ಯರಾದ ಸುಭಾಶ ಶೆಟ್ಟಿ, ಮಂಜು ಮಡಿವಾಳ ಬಾರಂದಾಡಿ, ಪ್ರವೀಣ ಶೆಟ್ಟಿ ನೂಜಾಡಿ, ರವಿ ಗಾಣಿಗ, ನಾಗರಾಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟಾರ್ಪಲ್ ಹೋದಿಕೆಯ ಗುಡಿಸಿಲಿನಲ್ಲಿ ಸಂಕಷ್ಟದ ಜೀವನವನ್ನು ಸಾಗಿಸುತ್ತಿದ್ದ ಸುಬ್ರಹ್ಮಣ್ಯ ಮೊಗವೀರ ಇತ್ತೀಚಿಗೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ದಾಖಲಾಗಿದ್ದರು.


Spread the love