ಯಡಮೊಗೆ ಸಾಮಾಜಿಕ ಕಾರ್ಯಕರ್ತನ ಕೊಲೆಯ ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್ ಸಂಘಟನೆ ಒತ್ತಾಯ

Spread the love

ಯಡಮೊಗೆ ಸಾಮಾಜಿಕ ಕಾರ್ಯಕರ್ತನ ಕೊಲೆಯ ಸಮಗ್ರ ತನಿಖೆಗೆ ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್ ಸಂಘಟನೆ ಒತ್ತಾಯ

ಉಡುಪಿ: ಯಡಮೊಗೆ ಸಾಮಾಜಿಕ ಕಾರ್ಯಕರ್ತ ಉದಯ್ ಗಾಣಿಗನ ಮೇಲೆ ಮೇಲೆ ಕಾರು ಹತ್ತಿಸಿ ಕೊಲೆಗೈದ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಗ್ರಹಿಸಿದೆ.

ಜನಪ್ರತಿನಿಧಿಗಳಾಗಿರುವ ನಾವು ಸಮಾಜದಲ್ಲಿರವು ಇತರರಿಗೆ ಮಾದರಿಯಾಗಬೇಕೇ ಹೊರತು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುವುದಲ್ಲ. ಆದ್ದರಿಂದ ಈ ಕೊಲೆಗೆ ಕಾರಣರಾದ ಯಡಮೊಗೆ ಪಂಚಾಯತ್ ಅಧ್ಯಕ್ಷರಾಗಿರುವ ಪ್ರಾಣೇಶ್ ಯಡಿಯಾಳ್ ಪಂಚಾಯತ್ ಸದಸ್ಯತ್ವವನ್ನು ತಕ್ಷಣ ರದ್ದುಗೊಳಿಸಬೇಕು ಹಾಗೂ ಮೃತನ ಕುಟುಂಬಕ್ಕೆ ಸರಕಾರದಿಂದ ರೂ25 ಲಕ್ಷ ಪರಿಹಾರ ಧನವನ್ನು ತಕ್ಷಣ ಘೋಷಿಸಬೇಕೆಂದು ಸಂಘಟನೆ ಸರಕಾರಕ್ಕೆ ಆಗ್ರಹಿಸಿದೆ.


Spread the love