ಯಶ್ಪಾಲ್‌ ಸುವರ್ಣಗೆ ಜೀವ ಬೆದರಿಕೆ – ಮೀನುಗಾರ ಸಂಘಟನೆಗಳಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ ಸಲ್ಲಿಕೆ

Spread the love

ಯಶ್ಪಾಲ್‌ ಸುವರ್ಣಗೆ ಜೀವ ಬೆದರಿಕೆ – ಮೀನುಗಾರ ಸಂಘಟನೆಗಳಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ ಸಲ್ಲಿಕೆ

ಉಡುಪಿ: ಕಳೆದ ಒಂದು ವಾರದಿಂದ ಮೀನುಗಾರ ಮುಖಂಡ ಯಶಪಾಲ್ ಸುವರ್ಣರವರಿಗೆ ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಹತ್ಯೆ ಬೆದರಿಕೆ ಮಾಡಿ, ತಲೆ ಕಡಿದವರಿಗೆ ರೂ. 10 ಲಕ್ಷ ನೀಡುವುದಾಗಿ ಬಹಿರಂಗ ಪೋಸ್ಟ್ ಮಾಡಿ ಹತ್ಯೆಗೆ ಪಚೋದನೆ ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಿ ಮೀನುಗಾರ ಸಂಘಟನೆಗಳಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮೀನುಗಾರರ ಮುಖಂಡರಾದ ಯಶಪಾಲ್ ಸುವರ್ಣ ರವರು ಹಿಂದುಳಿದ ವರ್ಗದ ರಾಷ್ಟ್ರೀಯ ನಾಯಕರಗಿದ್ದು, ಅಖಿಲ ಭಾರತೀಯ ಮೀನುಗಾರರ ಸಂಘದ ಪ್ರಧಾನ ಸಂಘಟನಾ ಕಾರ್ಯದರ್ಶಿ ಯಾಗಿದ್ದು ಅಕಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಗೌರವ ಸಲಹೆಗಾರರಾಗದ್ದು ಪತಿಷ್ಟಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರ್, ಮಹಾಲಕ್ಷ್ಮೀ ಕೋಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ಅಧ್ಯಕ್ಷರಾಗಿ, ಹಸಿಮೀನು ಮಾರಾಟ ಮಹಿಳೆಯರ ಸಹಕಾರಿ ಸಂಘದ ಆಡಳಿತ ಸಮಿತಿಯ ಸ್ಥಾಪಕ ಸದಸ್ಯರಾಗಿ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಸಮಿತಿಯ ಸದಷ್ಯ ರಾಗಿ, ನವ ಮಂಗಳೂರು ಬಂದರು ಮಂಡಳಿಯ ಮಾಜಿ ಟ್ರಷ್ಟಿಯಾಗಿ, ಮಲ್ಪೆ ಮೀಗಾರರ ಸಂಘದ ಸದಸ್ಯ ರಾಗಿ, ಇನ್ನೂ ಅನೇಕ ಸಂಘ ಸಂಸ್ಥೆ ಗಳಲ್ಲಿ ಸಕ್ರಿಯಾರಾಗಿದ್ದು ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸಮಸ್ಯೆ ಪರಿಹರಿಸುವಲ್ಲಿ ಮುಂಚೂಣಿ ಯಲ್ಲಿ ನಿಂತು ರಾಷ್ಟ್ರ ಮಟ್ಟದ ಖ್ಯಾತಿಯ ಯಶಪಾಲ್ ಸುವರ್ಣರಿಗೆ ಜೀವ ಬೆದರಿಕೆ ಹಾಕಿ ರುವ ಈ ಕ್ರತ್ಯವನ್ನು ಸಮಸ್ತ ಮೀನುಗಾರರ ಸಮುದಾಯವು ತೀವ್ರ ವಾಗಿ ಖಂಡೀಸುತೇ ವೆ.

ಧಾರ್ಮಿಕ, ಸಾಮಾಜಿಕ, ಸಹಕಾರಿ, ರಾಜಕೀಯ ಮುಖಂಡರಾಗಿ ಗುರುತಿಸಿಕೊಂಡಿರುವ ಯಶಪಾಲ್ ಸುವರ್ಣ ರಿಗೆ ಸಾಮಾಜಿಕ ಜಾಲ ತಾಣದಲ್ಲಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈ ಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವ ಬೆದರಿಕೆ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಒದಗಿಸ ಬೇಕಾಗಿ ಮನವಿಯಲ್ಲಿ ಕೋರಿದ್ದಾರೆ.

ನಿಯೋಗದಲ್ಲಿ ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಉಪಾಧ್ಯಕ್ಸರಾದ ರಮೇಶ್ ಕೋಟಿಯನ್, ಪ್ರದಾನ ಕಾರ್ಯ ದರ್ಶಿ ಕಿಶೋರ್ ದ ಸುವರ್ಣ ಕೋಶಾಧಿಕಾರಿ ಸೋಮನಾಥ್ ಕಾಂಚನ್, ಸಂಘಟನಾ ಕಾರ್ಯದರ್ಶಿ ದಯಾನಂದ ಕುಂದರ್ ಮೀನುಗಾರರ ಸಂಘದ ಅಧ್ಯಕ್ಷ ರಾದ ದಯಾನಂದ್ ಕೆ ಸುವರ್ಣ, ಉಪಾಧ್ಯಕ್ಸ ನಾಗರಾಜ ಜಿ ಕುಂದರ್, ಪ್ರಧಾನ ಕಾರ್ಯದರ್ಶಿ ರತ್ನಕರ್ ಸಾಲಿಯಾನ್ ಆಳ ಸಮುದ್ರ ಮೀನುಗರ ಸಂಘದ ಅಧ್ಯಕ್ಸ ಸುಭಾಸ್ ಮೆಂಡನ್, ಯಾಂತ್ರಿಕ ಸೊಸೈಟಿ ಯ ಅಧ್ಯಕ್ಷ ರಾಮಚಂದ್ರ ಕುಂದರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ನಿರ್ದೇಶಕರಾದ ಪ್ರಕಾಶ್ ಬಂಗೇರ, ಪ್ರಭಾಕರ್ ಸುವರ್ಣ, ಜಗನಾಥ್ ಅಮೀನ್, ಅಶೋಕ್ ಮೆಂಡನ್ ಆಳ ಸಮುದ್ರ ಮೀಗಾರರ ಸಂಘದ ಮಾಜಿ ಅಧ್ಯಕ್ಸ ವಿಠ್ಠಲ್ ಕರ್ಕೇರ, ಉಪಾಧ್ಯಕ್ಸ ಜ್ಞಾನೆಶ್ವರ ಕೋಟಿಯನ್, ಸುಧಾಕರ್ ಮೆಂಡನ್, ಸುರೇಶ ಬಿ ಕುಂದರ್, 370 ಟ್ರಾಲ್ ಬೋಟ್ ಸಂಘದ ಕಾರ್ಯದರ್ಶಿ ಪ್ರತಾಪ್ ಸಾಲಿಯಾನ್, ಕೋಶಾಧಿಕಾರಿ ಶಶಿಕಾಂತ್ ಕುಂದರ್, ಮನೋಹರ್ ಕುಂದರ್, ವಿಶ್ವನಾಥ್ ಶ್ರೀಯನ್, ಚಂದ್ರ ಶೇಖರ್ ಶ್ರೀಯನ್ ಪ್ರಶಾಂತ್ ತಿಂಗಳಾಯ ಮುಂತಾದವರು ಭಾಗವಹಿಸಿದ್ದರು


Spread the love