ಯಶ್ಪಾಲ್ ಸುವರ್ಣ ತಂದೆ ಆನಂದ ಪುತ್ರನ್ ನಿಧನ

Spread the love

ಯಶ್ಪಾಲ್ ಸುವರ್ಣ ತಂದೆ ಆನಂದ ಪುತ್ರನ್ ನಿಧನ

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ರವರ ತಂದೆ ಆನಂದ ಎನ್. ಪುತ್ರನ್ ರವರು ಶುಕ್ರವಾರ ಬೆಳಿಗ್ಗೆ ಅಜ್ಜರಕಾಡಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಮೃತರು ಪುತ್ರರಾದ ಯಶ್ ಪಾಲ್ ಎ. ಸುವರ್ಣ, ಯಶವಂತ್ ಎ. ಸುವರ್ಣ, ಪುತ್ರಿಯರಾದ ಯಶ್ವಿನಿ ಪ್ರಮೋದ್ ಕುಮಾರ್, ಯಶ್ವಿಲ್ ಪ್ರಸೂನ್ ಕುಮಾರ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಉಡುಪಿ ಬೀಡಿನಗುಡ್ಡೆ ಯ ಹಿಂದೂ ರುದ್ರಭೂಮಿಯಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.


Spread the love