Home Mangalorean News Kannada News ಯುಎಇ: ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ ಯಶಸ್ವಿಯಾಗಿ ನಡೆಯಿತು

ಯುಎಇ: ಇತಿಹಾಸದ ಅತೀದೊಡ್ಡ ದೇಹದಾರ್ಢ್ಯ ಸ್ಪರ್ಧೆ ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ ಯಶಸ್ವಿಯಾಗಿ ನಡೆಯಿತು

Spread the love

► ಅತೀ ಹೆಚ್ಚು ಬಹುಮಾನ ನೀಡಿ ಇತಿಹಾಸ ಬರೆದ ದುಬೈ ಇಂಡಿಯನ್ಸ್

► ಕೇಂದ್ರ ಬಿಂದು ‘ದ ಗ್ರೇಟ್ ಖಲಿ’ ಯುಎಇಗೆ ಚೊಚ್ಚಲ ಭೇಟಿ

ನ್ಯೂಸ್ ಕನ್ನಡ ಗಲ್ಫ್ ವರದಿ-ದುಬೈ: ನ್ಯೂಸ್ ಕನ್ನಡ ನೆಟ್ ವರ್ಕ್ ನ ಸಹ ಸಂಸ್ಥೆ ಅಲ್ ಝೀಲ್ ಫಿಟ್ ನೆಸ್ ಹಾಗೂ ದುಬೈ ಇಂಡಿಯನ್ಸ್ ಪ್ರಾಯೋಜಕತ್ವದಲ್ಲಿ ಎಮಿರೇಟ್ಸ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಮತ್ತು ಜನರಲ್ ಅಥಾರಿಟಿ ಆಫ್ ಯೂತ್ ಆ್ಯಂಡ್ ಸ್ಪೋರ್ಟ್ಸ್ ಅಫೇರ್ಸ್, ಯುಎಇ ಇದರ ಸಹಭಾಗಿತ್ವದಲ್ಲಿ ಅಲ್ ನಾಸರ್ ಲೇಸರ್ ಲ್ಯಾಂಡ್ ಐಸ್ ರಿಂಕ್ ನಲ್ಲಿ ಚೊಚ್ಚಲ “ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ 2015-16 ಚಾಂಪಿಯನ್ ಶಿಪ್” ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಫರ್ಧೆ ಯಶಸ್ವಿಯಾಗಿ ನಡೆಯಿತು.

15-20160203-sunit-jadav-body-builders-dubai-014

ಜಗಮಗಿಸುವ ಬೆಳಕಿನಲ್ಲಿ ಜಾಗತಿಕ ಗುಣಮಟ್ಟದಲ್ಲಿ ನಡೆದ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಫರ್ಧೆಯಲ್ಲಿ ‘ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ 2015-16 ಚಾಂಪಿಯನ್ ಶಿಪ್’ ಕಿರೀಟವನ್ನು ಸುನೀತ್ ಜಾಧವ್ ತನ್ನದಾಗಿಸಿಕೊಂಡರು.

ತಡರಾತ್ರಿಯವರೆಗೂ ನಡೆದ ಈ ಕಾರ್ಯಕ್ರಮಕ್ಕೆ ನೂರಾರು ಎಮಿರೇಟ್ಸ್ ನಾಗರೀಕರು ಹಾಗೂ ಏಶ್ಯನ್ ಕ್ರೀಡಾ ಪ್ರೇಮಿಗಳು ಸಾಕ್ಷಿಯಾದರು. ಬೆಳಗ್ಗೆ 11:00 ಗಂಟೆಗೆ ಕಾರ್ಯಕ್ರಮ ಆಯೋಜಿಸಿದ ತಂಡದ ಸದಸ್ಯರಾದ ಶೋಧನ್ ಪ್ರಸಾದ್ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮ ಸಂಘಟಕರಾದ ಇಮ್ರಾನ್ ಖಾನ್ ಎರ್ಮಾಳ್, ಆಫ್ರೋಝ್ ಅಸ್ಸಾದಿ, ಯೂಸುಬ್ ಅನ್ಸಾರ್, ಆಸಿಫ್ ಬೈಕಾಡಿ, ಸಿರಾಜುದ್ದೀನ್ ಅಬ್ದುಲ್ ಮುಖ್ತಾರ್, ಅಬ್ದುಲ್ ರಹ್ಮಾನ್ ಮತ್ತು ಚಿರಂಜೀತ್ ಹೆಗ್ಡೆ ಮುಂತಾದವರು ಈ ಸಂದರ್ಭ ವೇದಿಕೆಯಲ್ಲಿದ್ದರು.

ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲನೆ ದಿನ ಪರಿಶೀಲನೆ ನಡೆಸಿ ಆಯ್ಕೆಯಾಗಿದ್ದ ವಿವಿಧ ತೂಕಗಳ ವಿಭಾಗದ ಸ್ಫರ್ಧಿಗಳ ಅರ್ಹತಾ ಸುತ್ತಿನ ಸ್ಫರ್ಧೆ ಮೊದಲು ನಡೆಯಿತು. ಸ್ಫರ್ಧೆಯ ತೀರ್ಪುಗಾರರಾಗಿ ಪ್ರತಿಷ್ಠಿತ 12 ಮಂದಿ ಅಂತಾರಾಷ್ಟ್ರೀಯ ತೀರ್ಪುಗಾರರ ತಂಡವು ನಿರ್ವಹಿಸಿತು. ಬಳಿಕ 33 ಮಂದಿ ಅಂತಿಮ ಸ್ಫರ್ಧಿಗಳನ್ನು ಆಯ್ಕೆಮಾಡಲಾಯಿತು. ಅವರಲ್ಲಿ ಪ್ರತಿ ವಿಭಾಗದಲ್ಲಿ ಆರು ಮಂದಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಅವರಲ್ಲಿ ಸುನೀತ್ ಜಾಧವ್ “ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ 2-15-16 ಚಾಂಪಿಯನ್ ಶಿಪ್” ಪದವಿತನ್ನದಾಗಿಸಿಕೊಂಡರು. ಉಳಿದವರು ನಂತರದ ಸ್ಥಾನಗಳನ್ನು ವಿಭಾಗವಾರು ಹಂತದಲ್ಲಿ ಪಡೆದುಕೊಂಡರು.

ಆರು ಮಂದಿ ಅಂತಿಮ ಸ್ಫರ್ಧಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಕಪ್ ಹಾಗೂ ಪ್ರಮಾಣಪತ್ರವನ್ನು ನೀಡಲಾಯಿತು. ಪ್ರಥಮ ರನ್ನರ್ ಅಪ್ ಗೆ ಹೆಚ್ಚುವರಿಯಾಗಿ ರೂ. 50,000 ಮತ್ತು ದ್ವಿತೀಯ ರನ್ನರ್ ಅಪ್ ಗೆ ರೂ. 25,000 ಚೆಕ್ ವಿತರಿಸಲಾಯಿತು.

ಪದವಿ ವಿಜೇತರು

► “ಮಿಸ್ಟರ್ ಇಂಟರ್ ನ್ಯಾಶನಲ್ ಇಂಡಿಯನ್ 2-15-16 ಚಾಂಪಿಯನ್ ಶಿಪ್” ಪದವಿ, ರೂ. 10,00,000 ನಗದು ಬಹುಮಾನ, ಫಲಕ, ಪ್ರಮಾಣ ಪತ್ರ ಮತ್ತು ತುಂಬೆ ಗ್ರೂಪ್ ನಿಂದ ವಿಶೇಷ ಬಹುಮಾನ ಇತ್ಯಾದಿಗಳನ್ನು ಸುನೀತ್ ಜಾಧವ್ ಸ್ವೀಕರಿಸಿದರು.

►ದ್ವಿತೀಯ ಸ್ಥಾನವನ್ನು ವಿಪಿನ್ ಪೀಟರ್ ಪಡೆದುಕೊಂಡರು. ಅವರಿಗೆ ರೂ. 5 ಲಕ್ಷ ನಗದು ಬಹುಮಾನ, ಕಪ್, ಪದಕ, ಪ್ರಮಾಣ ಪತ್ರ ಮತ್ತು ತುಂಬೆ ಗ್ರೂಪ್ ನಿಂದ ವಿಶೇಷ ಬಹುಮಾನ ಲಭಿಸಿತು.

►ಮೂರನೇ ಸ್ಥಾನವನ್ನು ರಾಮ್ ನಿವಾಸ್ ಚಂದ್ ಗಳಿಸಿದರು. ಅವರು ರೂ. 2.5 ಲಕ್ಷ, ಕಪ್, ಪದಕ, ಪ್ರಮಾಣ ಪತ್ರ ಮತ್ತು ತುಂಬೆ ಗ್ರೂಪ್ ನವರ ವಿಶೇಷ ಬಹುಮಾನ ಪಡೆದರು.

►ನಾಲ್ಕನೇ ಸ್ಥಾನವನ್ನು ಅನಿಲ್ಗೋಚಿಕರ್ ಪಡೆದರು. ಅವರಿಗೆ ರೂ. 1 ಲಕ್ಷ ನಗದು, ಕಪ್, ಫಲಕ ಮತ್ತು ಪ್ರಮಾಣ ಪತ್ರ ನೀಡಲಾಯಿತು.

►ಐದನೇ ಸ್ಥಾನವನ್ನು ಸುಮೀರ್ ಬಲ್ಬೀರ್ ಸಿಂಗ್ ಸ್ವೀಕರಿಸಿದರು. ಅವರು ರೂ. 1 ಲಕ್ಷ ನಗದು ಬಹುಮಾನ, ಕಪ್, ಫಲಕ ಹಾಗೂ ಪ್ರಮಾಣ ಪತ್ರವನ್ನು ಗಳಿಸಿದರು.

►ಆರನೇ ಸ್ಥಾನವನ್ನು ಸೂರಜ್ ರೇಶಮ್ ಕಲಾಥಿನ್ಕಲ್ ಪಡೆದರು. ಅವರಿಗೆ ರೂ. 1 ಲಕ್ಷ ನಗದು, ಕಪ್, ಫಲಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಎಲ್ಲಾ ವಿಜೇತರನ್ನೂ WWಈ ಖ್ಯಾತಿಯ ‘ದ ಗ್ರೇಟ್ ಖಲಿ’ ಗೌರವಿಸಿದರು. ಅಬ್ದುಲ್ ಕರೀಮ್ ಮುಹಮ್ಮದ್, ಸಯೀದ್, ವಾಲಿದ್ ಅಬ್ದುಲ್ ಕರೀಮ್, ಖಲೀದ್ ಬಿಲೂಶಿ, ಸರಬ್ ಜೀತ್ ಕೌರ್, ಫರ್ಝಾದ್ ಸಮೀಮಿಮತ್ತು ಟೀಪ್ ದುಬೈ ಇಂಡಿಯನ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ಟೀಮ್ ದುಬೈ ಇಂಡಿಯನ್ ತಂಡದ ನಾಯಕ ಇಮ್ರಾನ್ ಖಾನ್ ಎರ್ಮಾಳ್ ಧನ್ಯವಾದ ಅರ್ಪಿಸುವದರೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಆರ್.ಜೆ. ಹರ್ಷ, ಶೋಧನ್ ಪ್ರಸಾದ್ ಮತ್ತು ಹಸನ್ ಲಾಶೆನ್ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಅಶ್ವಿನಿ ಮತ್ತು ಸಯೀದಾ ನೇತೃತ್ವದ ಮಹಿಳಾ ತಂಡ ಹಾಗೂ ಆದರ್ಶ್, ಕೌಸರ್ ಮತ್ತು ಸಮೀರ್ ಬೋಳಾರ್ ರ ತಂಡ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.


Spread the love

Exit mobile version