ಯುವಕರನ್ನು ಜೆಡಿಎಸ್ ನತ್ತ ಹೆಚ್ಚು ಒಲವು ತೋರಿಸುವ ಕೆಲಸ ಕಾರ್ಯಕರ್ತರಿಂದ ನಡೆಯಬೇಕು – ಅಕ್ಷಿತ್ ಸುವರ್ಣ

Spread the love

ಯುವಕರನ್ನು ಜೆಡಿಎಸ್ ನತ್ತ ಹೆಚ್ಚು ಒಲವು ತೋರಿಸುವ ಕೆಲಸ ಕಾರ್ಯಕರ್ತರಿಂದ ನಡೆಯಬೇಕು – ಅಕ್ಷಿತ್ ಸುವರ್ಣ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಜನತಾದಳ (ಜಾ) ಇದರ ಪ್ರಮುಖ ಪದಾಧಿಕಾರಿಗಳ ಸಭೆಯು ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನಿರ್ದೇಶನಂತೆ ವಿಧಾನಸಭಾ ಕ್ಷೇತ್ರ ಪುತ್ತೂರು ತಾಲೂಕು ಯುವ ಘಟಕದ ಅಧ್ಯಕ್ಷರಾದ ಶಿವು ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರು ಪಕ್ಷ ಸಂಘಟನೆಯನ್ನು ಹೇಗೆ ಬಲಪಡಿಸಿಕೊಳ್ಳಬೇಕು ಯುವಕರನ್ನು ಹೇಗೆ ಸಂಘಟಿತರಾಗಿ ಮಾಡಬೇಕು ಹಾಗೂ ಮುಂಬರುವ ಚುನಾವಣೆಯಲ್ಲಿ ನಮ್ಮ ಕುಮಾರಸ್ವಾಮಿ ಅವರ ಸರ್ಕಾರ ರಚನೆಯಾಗುವುದರಲ್ಲಿ ನಮ್ಮ ಯುವಕರ ಪಾತ್ರ ಅತಿ ಹೆಚ್ಚು ಪ್ರಾಮುಖ್ಯವಾದದ್ದು ಇದಕ್ಕೆ ಸಂಘಟಿತರಾಗಿ ಜಾತ್ಯತೀತರಾಗಿರುವಂತ ಯುವಕರನ್ನು ಅತೀ ಹೆಚ್ಚು ಪಕ್ಷದ ಕಡೆಗೆ ಆಕರ್ಷಿಸಿ ಸದಸ್ಯತ್ವ ಅಭಿಯಾನದ ಮೂಲಕ ಬರಮಾಡಿಕೊಂಡು ಪಕ್ಷವನ್ನು ಇನ್ನಷ್ಟು ಬಲಪಡಿಸಿಕೊಂಡು ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಎಂದು ಮಾರ್ಗದರ್ಶನ ನೀಡಿದರು.

ಅಲ್ಲದೆ ವಿನಾಕಾರಣ ನಿರಂತರವಾಗಿ ಸಭೆ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದ ಹಾಗೂ ತಮ್ಮ ಹುದ್ದೆಯನ್ನು ನಿರ್ವಹಿಸದ ಯುವ ಪದಾಧಿಕಾರಿಗಳ ಹುದ್ದೆಯನ್ನು ನಿರ್ಧಾಕ್ಷಿಣ್ಯವಾಗಿ ವಜಗೊಳಿಸಬೇಕೆಂದು ಯುವ ಘಟಕದ ಕ್ಷೇತ್ರಧ್ಯಕ್ಷರಿಗೆ ತಾಕೀತು ಮಾಡಿದರು..

ಸಭೆಯಲ್ಲಿ ಜಿಲ್ಲಾ ಯುವ ಮಹಾಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು , ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್ ಕರ್ಕೇರ, ಮೋಹನ್, ಜೈದೀಪ್, ದಿನೇಶ್, ಮೋಹಿತ್, ಆರ್.ಕೆ.ಸಾಲ್ಯಾನ್ , ರವಿ ಪುಣಚ್ಚ, ರಿನೀತ್, ನಿತೀಶ್, ನಿಶಾಂತ್, ನೌಶಾದ್, ಪ್ರಶಾಂತ್ ಮತ್ತು ಇತರರು ಪಾಲ್ಗೊಂಡರು…
ಯುವ ಘಟಕದ ಕ್ಷೇತ್ರಧ್ಯಕ್ಷರಾದ ಶಿವು ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ತಾಲೂಕು ಯುವ ಘಟಕದ ಮಹಾಪ್ರಧನ ಕಾರ್ಯದರ್ಶಿ ಅಶ್ವಿನ್ ಶೆಟ್ಟಿ ವಂದಿಸಿದರು…


Spread the love