ಯುವಕರಿಗೆ ದೇಶಾಭಿಮಾನ ಇರಬೇಕು:ಸಿ.ಎನ್. ಮಂಜೇಗೌಡ

Spread the love

ಯುವಕರಿಗೆ ದೇಶಾಭಿಮಾನ ಇರಬೇಕು:ಸಿ.ಎನ್. ಮಂಜೇಗೌಡ

ಮೈಸೂರು: ಸೈನ್ಯಕ್ಕೆ ಸೇರುವ ಯುವಕರಿಗೆ ಸ್ವಾಭಿಮಾನ ಮತ್ತು ದೇಶಾಭಿಮಾನ ಎರಡು ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.

ಬೆಳವಾಡಿಯಲ್ಲಿರುವ ಸೈನಿಕ್ ಅಕಾಡೆಮಿ, ಮೈಸೂರು ಇದರ ವತಿಯಿಂದ ನಡೆದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸೈನ್ಯದಲ್ಲಿ ಕೊಡುವ ತರಬೇತಿ ಮೊದಲು ಮನುಷ್ಯರನ್ನಾಗಿ ಮಾಡುತ್ತದೆ. ಸೈನ್ಯದವರು ಯಾವುದಕ್ಕೂ ರಾಜಿ ಆಗುವುದಿಲ್ಲ. ಸೈನ್ಯದಲ್ಲಿ ಆರ್ಡರ್‌ಗಳನ್ನು ಪಾಲಿಸಲೇಬೇಕು. ತರಬೇತಿ ತುಂಬಾ ಕಠಿಣವಾಗಿರುತ್ತದೆ. ಯುವಕರು ಈ ದೇಶದ ಭವಿಷ್ಯ. ಈ ದೇಶಕ್ಕೆ ಯುವಶಕ್ತಿ ಬೇಕಾಗಿದೆ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಸಮಯಕ್ಕೆ ಬೆಲೆ ಕೊಡಬೇಕು. ಜೀವನದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಬರುತ್ತವೆ. ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಕಾಣಬೇಕು.

ಮನುಷ್ಯ ಈ ಭೂಮಿ ಮೇಲೆ ಹುಟ್ಟಿದ ಮೇಲೆ ಈ ದೇಶಕ್ಕೆ ಏನನ್ನಾದರೂ ಕೊಡುಗೆ ನೀಡಿ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಬೇಕು. ಯುವಕರು ಜೀವನದಲ್ಲಿ ಮೊದಲು ತ್ಯಾಗ ಮಾಡುವುದನ್ನು ಕಲಿಯಿರಿ. ತಂದೆ, ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಿರಿ ಇಂದು ಪ್ರಪಂಚವನ್ನು ಅಂಗೈಯಲ್ಲಿ ನೋಡಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಿ ಈ ದೇಶಕ್ಕೆ ಏನಾದರೂ ಕೊಡುಗೆಗಳನ್ನು ನೀಡಿ ಶ್ರೀಧರ್ ರವರು ಅಕಾಡೆಮಿ ಸ್ಥಾಪಿಸಿ ಮಾಡುತ್ತಿರುವ ಉದ್ದೇಶ ಒಳ್ಳೆಯದಾಗಿದೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಸೈನಿಕ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್, ಅನಿತಾಶ್ರೀಧರ್, ವೈ.ಎನ್.ಗಂಗಾ, ಆರ್. ಶ್ವೇತಾ, ಎಸ್.ಎಸ್. ರವಿ, ವಿನುತ ಆರ್, ಸುನೀತ, ವಿಜಯಕುಮಾರ್, ದಿವಾಕರ ಉಪಸ್ಥಿತರಿದ್ದರು.


Spread the love