
ಯುವತಿಯನ್ನು ಮತಾಂತರ ಮಾಡಿದ ಆರೋಪ – ವೈದ್ಯೆ ಸೇರಿ ನಾಲ್ವರ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಹಿಂದೂ ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿ ಕೊಲೆ ಬೆದರಿಕೆ ಒಡ್ಡಿದ ಆರೋಪ ಮೇಲೆ ವ್ಯೆದ್ಯೆ ಸೇರಿದಂತೆ ನಾಲ್ವರ ಮೇಲೆ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಖಲೀಲ್, ಡಾ|ಜಮೀಲಾ, ಐಮನ್ ಮತ್ತು ಇನ್ನೋರ್ವ ಮಹಿಳೆ ಎಂದು ಗುರುತಿಸಲಾಗಿದೆ.
ಹಿಂದೂ ಯುವತಿ ಬಿಲ್ಲವ ಸಮುದಾಯಕ್ಕೆ ಸೇರಿದ್ದು, ಬಿಕರ್ನಕಟ್ಟೆಯಲ್ಲಿ ಕೆಲಸ ಮಾಡಿಕೊಂಡಿದ್ದು ತನ್ನ ಮೊಬೈಲ್ ಗೆ ಖಲೀಲ್ ಅವರ ಮೊಬೈಲ್ ಶಾಪ್ ನಲ್ಲಿ ರೀಚಾರ್ಜ್ ಮಾಡಿಕೊಳ್ಳುತ್ತಿದ್ದಳು. ಈ ವೇಳೆ ಖಲೀಲ್ ನ ಪರಿಚಯವಾಗಿದ್ದು, 2021 ರ ಜನವರಿ 14 ರಂದು ಒಳ್ಳೆಯ ಕೆಲಸ ಹಾಗೂ ಹಣವನನ್ಉ ಕೊಡಿಸುವುದಾಗಿ ಪುಸಲಾಯಿಸಿ ಆತನ ಕುಟುಂಬದ ಮನೆಯಾದ ಕಲ್ಪಾಪು ಎಂಬಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಮಹಿಳೆಯರಿಗೆ ಪರಿಚಯಿಸಿದ್ದನು ಎನ್ನಲಾಗಿದೆ. ಯುವತಿಗೆ ಕುರಾನ್ ಓದಲು ಮತ್ತು ನಮಾಝ್ ಮಾಡಲು ಕಲಿಸುವಂತೆ ಹೇಳಿ ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಮನೆಯಲ್ಲಿದ್ದ ಮಹಿಳೆಯರು ಯುವತಿಗೆ ಒತ್ತಾಯಪೂರ್ವಕವಾಗಿ ನಮಾಝ್ ಮಾಡಿಸಿರುತ್ತಾರೆ ಅಲ್ಲದೆ ಖಲೀಲ್ ಆಕೆಗೆ ಲೈಂಗಿಕ ಕಿರುಕುಳ ಕೂಡ ನೀಡಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿಯ ಹೆಸರನ್ನು ಬದಲಾಯಿಸಿದ್ದಲ್ಲದೆ ಈ ವಿಷಯವನ್ನು ಯಾರಿಗಾದರೂ ಹೇಳಿದ್ದರೆ ನಿನ್ನ ಕೆಲಸವನ್ನು ತೆಗೆಸುತ್ತೇನೆ ಎಂದು ಬೆದರಿಕೆ ಕೂಡ ಹಾಕಿರುತ್ತಾನೆ. 2021 ಜನವರಿ 17 ರಂದು ಯುವತಿ ತನ್ನ ಮನೆಗೆ ಬಂದಿದ್ದು ಬಳಿಕ ಆಕೆ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದ ಮಾಲಕರ ಮನೆಯಲ್ಲಿ ಕೆಲಸಕ್ಕೆ ಸೇರಿ 8 ತಿಂಗಳು ಕೆಲಸ ಮಾಡಿಕೊಂಡಿದ್ದಾಗ ಅಲ್ಲಿ ಕೆಲಸ ಮಾಡಿಕೊಂಡಿದ್ದ ರುಕಿಯಾ ಎಂಬರು ಆಕೆಯನ್ನು ಕಾಸರಗೋಡಿನ ಮುಸ್ಲಿಂ ಸಮುದಾಯದ ಮನೆಯೊಂದರಿಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು ಅಲ್ಲಿ 8 ತಿಂಗಳು ಕೆಲಸ ಮಾಡಿದ ಆಕೆ ಮತ್ತೆ ಪುನಃ ಆಸ್ಪತ್ರೆಯ ಮ್ಹಾಲಕರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಆ ವೇಳೆ ಸೈನಾಝ್ ಎಂಬವರು ಆಕೆಗೆ ಡಾ. ಝಮೀಲಾ ಮತ್ತು ಡಾ ಸೈಯ್ಯದ್ ಎಂಬವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿ 8 ತಿಂಗಳುಗಳ ತನಕ ಕೆಲಸ ಮಾಡಿಕೊಂಡಿದ್ದು ಆ ಸಮಯದಲ್ಲಿ ಡಾ ಜಮೀಲಾರು ಯುವತಿಗೆ ಬುರ್ಖಾ ಧರಿಸಲು ತಿಳಿಸಿದ್ದರು ಎನ್ನಲಾಗಿದೆ.
ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಯುವತಿ ಅಕ್ಟೋಬರ್ 25 ರಂದು ಕೆಲಸ ಬಿಟ್ಟು ಬಂದಿದ್ದು ಇನ್ಸ್ಟಾಗ್ರಾಂ ಮೂಲಕ ಭದ್ರಾವತಿಯ ಐಮಾನ್ ಎಂಬವರ ಪರಿಚಯವಾಗಿದ್ದು ಆತನನ್ನು ಪ್ರೀತಿಸುವಂತೆ ಯವತಿಗೆ ಒತ್ತಾಯ ಮಾಡಿರುತ್ತಾನೆ. ಅಲ್ಲದೆ ಆತನ ಒತ್ತಾಯಕ್ಕೆ ಮಣಿದು ಆತನ ಮನೆಗೆ ಕೂಡ ಹೋಗಿ ಬಂದಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯುವತಿ ನೀಡಿದ ದೂರಿನಂತೆ ಮಹಿಳಾ ಠಾಣಾ ಪೊಲೀಸರು ಮತಾಂತರ ನಿಷೇಧ ಕಾಯಿದೆ 2022 ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ