
ಯುವ ಕಾಂಗ್ರೆಸ್ ನಿಂದ ಪ್ರಜಾಧ್ವನಿ ಯಾತ್ರೆಯ ಪೂರ್ವಭಾವಿ ಸಭೆ
ಜ.22 ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿರುವ ‘ಪ್ರಜಾಧ್ವನಿ ಯಾತ್ರೆ’ ಯ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಪೂರ್ವಭಾವಿ ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಭರತ್ ಮುಂಡೋಡಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಕೆಪಿವೈಸಿ ಪ್ರಧಾನ ಕಾರ್ಯದರ್ಶಿ ಆಶಿತ್ ಪಿರೇರಾ, ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್ ಆಳ್ವ, ಅಭಿಷೇಕ್ ಬೆಳ್ಳಿಪ್ಪಾಡಿ, ಕೆಪಿವೈಸಿ ಕಾರ್ಯದರ್ಶಿ ನಾಸೀರ್ ಸಾಮಾನಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ಪ್ರಸಾದ್ ಮಲ್ಲಿ, ಫೈಝಲ್ ಕಡಬ, ಅಶ್ವಥ್ ರಾಜ್, ನವೀದ್ ಅಖ್ತರ್, ರೋಷನ್ ರೈ, ಅಭಿನಂದನ್ ಹರೀಶ್, ದೀಕ್ಷಿತ್ ಅತ್ತಾವರ್, ಹಸನ್ ಫಲ್ನೀರ್, ಬಿ.ಎಸ್ ಇಸ್ಮಾಯಿಲ್, ಮೊಹಮ್ಮದ್ ಇರ್ಷಾದ್, ಸಂಜಾನ ಚಲವಾದಿ, ಆಲ್ವಿನ್ ಮೊಂತೆರೋ, ನೌಶೀನ್, ಅಭಿದೇವ್ ಅರಿಗ ಬ್ಲಾಕ್ ಅಧ್ಯಕ್ಷರಾದ ಶಾಹುಲ್ ಹಮೀದ್, ಅಶೋಕ್ ಪೂಜಾರ್, ಫಾರೂಕ್ ಪೆರ್ನೆ, ಸುನಿಲ್ ಕುಮಾರ್, ರಾಕೇಶ್, ಇಬ್ರಾಹಿಂ ನವಾಝ್, ಶ್ರೀಪ್ರಸಾದ್ ಪಾಣಾಜೆ, ಜೈಸನ್ ಸುರತ್ಕಲ್, ಕೆಪಿವೈಸಿ ಸಂಯೋಜಕ ಸೌಹಾನ್ ಎಸ್.ಕೆ, ಮುಖಂಡರಾದ ಪ್ರಹ್ಲಾದ್, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ನಜೀಬ್ ಮಂಚಿ, ಮೂನ ಜುಲೇಕ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.