ಯುವ ಕಾಂಗ್ರೇಸ್ ಕಾರ್ಕಳ ವತಿಯಿಂದ ಹೊಂಡಮಯ ರಸ್ತೆಯಲ್ಲಿ ಬಿಳಿ ಬೆಂಡೆ ಗಿಡ‌ ಪ್ರತಿಭಟನೆ

Spread the love

ಯುವ ಕಾಂಗ್ರೇಸ್ ಕಾರ್ಕಳ ವತಿಯಿಂದ ಹೊಂಡಮಯ ರಸ್ತೆಯಲ್ಲಿ ಬಿಳಿ ಬೆಂಡೆ ಗಿಡ‌ ಪ್ರತಿಭಟನೆ

ಕಾರ್ಕಳ: ಮಂಗಳೂರು ರಸ್ತೆಯಲ್ಲಿರುವ ಟಿ.ಎ‌.ಪಿ‌.ಎಂ.ಸಿ ಮುಂಬಾಗದ‌ ರಸ್ತೆಯ‌ ಹೊಂಡದಲ್ಲಿ ಬಿಳಿ ಬೆಂಡೆ ಗಿಡ ನೆಡುವ ಮೂಲಕ ಯುವ ಕಾಂಗ್ರೇಸ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಚಿನ್ನದ ರಸ್ತೆಯ ಆಸೆ ತೋರಿಸಿದವರು ಗುಂಡಿ ಬಾಗ್ಯವನ್ನು ಕರುಣಿಸುತ್ತಿದ್ದಾರೆ, ಅಸಮರ್ಪಕ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಅಹಾರ ಕಿಟ್ಟನ್ನು ನೀಡುವ ಬದಲಿಗೆ ಬೆಂಡೆ ಬೀಜವನ್ನು ನೀಡಿ ಜನರಿಗೆ ಮೂರ್ಖರನ್ನಾಗಿಸುವ ಪ್ರಯತ್ನ ನಡೆಯುತಿದೆ ಎಂದು ಶಾಸಕ ಸುನೀಲ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ‌ ಸಂಧರ್ಭದಲ್ಲಿ ಕಾಂಗ್ರೇಸ್ ಮುಖಂಡ ಪುರಸಭಾ ಸದಸ್ಯ ಶುಭದರಾವ್, ಯುವ ಕಾಂಗ್ರೇಸ್ ಅದ್ಯಕ್ಷ ಯೋಗಿಶ್ ಇನ್ನಾ, ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಎ ಶೆಟ್ಟಿ ಬಜಗೋಳಿ, ಪ್ರದೀಪ್ ಶೆಟ್ಟಿ‌ ನಲ್ಲೂರು, ರಾಜೇಂದ್ರ, ಶಾಮ್ ಮೊದಲಾದವರು ಉಪಸ್ಥಿತಿತರಿದ್ದರು


Spread the love